ಕಾಸರಗೋಡು: ಅಂತಾರಾಜ್ಯ ಮಾದಕ ವಸ್ತು ಸಾಗಾಟ ತಂಡದ ಓರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಅನಂಗೂರು ಟಿ.ವಿ. ಸ್ಟೇಷನ್ ರಸ್ತೆಯ ಆಹಮ್ಮದ್ ಕಬೀರ್(22) ಬಂಧಿತ ಆರೋಪಿ. ಬಂಧಿತನಿಂದ 15 ಗ್ರಾಂ. ಎಂಡಿಎಂಎ ಮಾದಕ ವಸ್ತು ಸಹಿತ ನುಳ್ಳಿಪ್ಪಾಡಿಯಿಂದ ಈತನನ್ನು ಬಂಧಿಸಲಾಗಿದೆ. ಈತ ಗೋವಾದಿಂದ ಕಾಸರಗೋಡಿಗೆ ಮಾದಕ ವಸ್ತು ಸಾಗಾಟ ಜಾಲದ ಪ್ರಮುಖ ರೂವಾರಿಯಾಗಿದ್ದಾನೆ.
ಆರೋಪಿ ವಿರುದ್ದ ಗಾಂಜಾ ಹಾಗೂ ಎಂಡಿಎಂಎ ಸಾಗಾಟ ಬಗ್ಗೆ ಕಾಸರಗೋಡು ಅಬಕಾರಿ ದಳ ಈ ಹಿಂದೆ ಪ್ರಕರಣ ದಾಖಲಿಸಿ ಕೊಂಡಿತ್ತು.
ಅಂತಾರಾಜ್ಯ ಮಾದಕ ವಸ್ತು ಸಾಗಾಟದ ಪ್ರಮುಖ ರೂವಾರಿ ಪೊಲೀಸ್ ವಶಕ್ಕೆ
Subscribe
Login
0 Comments