Sunday, June 8, 2025

78 ಬಾರಿ ಕೊರೋನಾ ಪಾಸಿಟಿವ್, 14 ತಿಂಗಳು ಕ್ವಾರಂಟೈನ್‌ನಲ್ಲಿದ್ದ ಭೂಪ

ಇಸ್ತಾನ್‌ಬುಲ್: ನಮಗೆ ಒಂದು ಬಾರಿ ಕೊರೋನಾ ಬಂದು ಹೋದರೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಡಲು ಪ್ರಾರಂಭಿಸುತ್ತದೆ. ಆದರೆ ಟರ್ಕಿ ದೇಶದ ಇಸ್ತಾನ್‌ಬುಲ್ ನಲ್ಲಿ ವಾಸಿಸುವ ಮುಜಾಫರ್ ಕಯಾಸನ್ ಎಂಬ ವ್ಯಕ್ತಿಗೆ ಬರೋಬ್ಬರಿ 78 ಬಾರಿ ಕೊರೋನಾ ಪಾಸಿಟಿವ್ ಹಾಗೂ 14 ತಿಂಗಳಿಂದ ಕ್ವಾರಂಟೈನ್ ನಲ್ಲಿದ್ದಾರೆ.

ಮುಜಾಫರ್ ಕಯಾಸನ್ ಅವರಿಗೆ 2020 ರ ನವೆಂಬರ್ ನಲ್ಲಿ ಮೊದಲ ಬಾರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಅಂದಿನಿಂದ ಕೊರೋನಾ ಪರೀಕ್ಷೆಗೆ ಒಳಗಾದ ಪ್ರತಿ ಬಾರಿಯೂ ಪಾಸಿಟಿವ್ ವರದಿ ಬಂದಿದೆ. 78 ಬಾರಿ ಕೊರೋನಾ ಸೋಂಕು ದೃಢ ಪಟ್ಟಿದ್ದು, ಒಂದು ವರ್ಷಕ್ಕೂ ಹೆಚ್ಚು ಕಾಲ ಕ್ವಾರಂಟೈನ್ ನಲ್ಲಿದ್ದಾರೆ. ಸೋಂಕು ದೃಢ ಪಟ್ಟ ಪ್ರತಿ ಬಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಲಕ್ಷಣಗಳು ಕಡಿಮೆಯಾದ ನಂತರ ಮನೆಗೆ ಹಿಂತಿರುಗಿ ಹೋಮ್ ಕ್ವಾರಂಟೈನ್ ನಲ್ಲಿರುತ್ತಿದ್ದರು. ಆದರೂ ಸೋಂಕಿನ ಲಕ್ಷಣಗಳು ಕಡಿಮೆಯಾಗದೆ ಹಾಗೇ ಮುಂದುವರೆದಿದೆ.

ಮುಜಾಫರ್ ಅವರ ದೇಹದಲ್ಲಿ ರೋಗನಿರೀಧಕ ಶಕ್ತಿಯು ಸಕ್ರಿಯವಾಗಿರದ ಕಾರಣ ಈ ತೊಂದರೆ ಉಂಟಾಗಿದೆ ಎಮದು ಚಿಕಿತ್ಸೆ ನೀಡುತ್ತಿದ್ದ ವೈದ್ಯರು ತಿಳಿಸಿದ್ದಾರೆ. ಇವರು ಲ್ಯುಕೇಮಿಯಾದಿಂದ ಬಳಲುತ್ತಿದ್ದು, ಇವರ ಪತ್ನಿ ಹಾಗೂ ಮಗನಿಗೆ ನೆಗೆಟಿವ್ ವರದಿ ಬಂದಿದೆ. ಮುಜಾಫರ್ ಅವರನ್ನು ಕೊರೋನಾ ಬಿಟ್ಟು ಬಿಡದಂತೆ ಕಾಡುತ್ತಲೇ ಇದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles