Saturday, June 7, 2025

ಟಿಕೆಟ್ ಇಲ್ಲದೇ ವಿಮಾನದಲ್ಲಿ 2700ಕಿ.ಮೀ ಪ್ರಯಾಣಿಸಿದ 9ರ ಪೋರ..!

ಈಗಿನ ಕಾಲದ ಮಕ್ಕಳು ಆಧುನಿಕ ತಂತ್ರಜ್ಞಾನ ಬಳಸುವುದರಲ್ಲಿ ನಿಪುಣರಾಗಿರುತ್ತಾರೆ. ದಿನಕ್ಕೊಂದು ವಿಷಯವನ್ನು ಕಲಿಯುತ್ತಾ ಹೊಸ ಹೊಸ ಅನ್ವೇಷಣೆಯನ್ನು ಮಾಡುತ್ತಲೇ ಇರುತ್ತಾರೆ. ಹೀಗೆ ಯೂಟ್ಯೂಬ್‌ ಸ್ಪೂರ್ತಿ ಪಡೆದು 9ರ ಪೋರ 2700ಕಿ.ಮೀ ಟಿಕೆಟ್ ಇಲ್ಲದೇ ವಿಮಾನದಲ್ಲಿ ಪ್ರಯಾಣಿಸಿದ್ದಾನೆ.

ಬ್ರೇಜಿಲ್‌ನಲ್ಲಿ ಈ ‍ಘಟನೆ ನಡೆದಿದ್ದು, ಇಮ್ಯಾನುವೇಲ್ ಮಾರ್ಕ್ವೇಸ್ ಎಂಬ ಪೋರ ಒಬ್ಬನೇ ಟಿಕೆಟ್ ಪಡೆಯದೆ ವಿಮಾನ ಹೊಕ್ಕಿ ಸುಮಾರು 2700ಕಿ.ಮೀ ಪ್ರಯಾಣಿಸಿದ್ದಾನೆ. ಈ ಹುಡುಗ ಕಾಣೆಯಾಗಿರುವುದಾಗಿ ಮನೌಸ್‌ ನಗರದಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪುಟ್ಟ ಬಾಲಕನನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ.

ಇಮ್ಯಾನುವೇಲ್ ವಿಮಾನದಲ್ಲಿ ಪ್ರಯಾಣಿಸಿ ಸಾವೋಪೌಲೋ ರಾಜ್ಯದ ಕರಾವಳಿ ಭಾಗದಲ್ಲಿರುವ ಗುವಾರುಲ್ಹೋಸ್‌ ಎಂಬ ನಗರವನ್ನು ತಲುಪಿದ್ದ. ಸ್ಥಳೀಯ ಅಧಿಕಾರಿಗಳು ವಿಚಾರಿಸಿದಾಗ ಅವನು ವಿಮಾನದಲ್ಲಿ ಪತ್ತೆಯಾಗದಂತೆ ಯಾವ ರೀತಿ ಸಂಚರಿಸಬಹುದೆಂದು ಯೂಟ್ಯೂಬ್‌ನಲ್ಲಿ ನೋಡಿ ಈ ಪ್ರಯೋಗ ಮಾಡಿದ್ದೇನೆ ಎಂದಿದ್ದಾನೆ. ಈ ಹುಡುಗ ಯಾರಿಗೂ ತಿಳಿಯದ ಹಾಗೇ LATAM ಏರ್ಲೈನ್ಸ್‌ನಲ್ಲಿ ಹೇಗೆ ಪ್ರವೇಶ ಮಾಡಿದ್ದಾನೆ ಎಂದು ಇದುವರೆಗೂ ಗೊತ್ತಾಗಿಲ್ಲ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles