Saturday, June 7, 2025

ಒಮಿಕ್ರಾನ್ ನ ಹೊಸ ಲಕ್ಷಣ ಪತ್ತೆ

ದಿನ ದಿನಕ್ಕೂ ಕೊರೊನಾ ಹೊಸ ರೂಪಾಂತರ ಒಮಿಕ್ರಾನ್ ನ ಹೊಸ ಹೊಸ ಲಕ್ಷಣ ಪತ್ತೆಯಾಗುತ್ತಿದೆ. ಇದರಿಂದ ಜನರಲ್ಲಿ ಒಮಿಕ್ರಾನ್ ಬಗ್ಗೆ ಭೀತಿ ಹೆಚ್ಚಾಗುತ್ತಿದೆ. ಕೆಲವರು ಒಮಿಕ್ರಾನ್ ವೇಗವಾಗಿ ಹರಡುತ್ತದೆ ಆದರೆ ಹೆಚ್ಚು ಅಪಾಯ ಉಂಟು ಮಾಡುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೂ ಒಮಿಕ್ರಾನ್ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ತಜ್ಞರು ಒಮಿಕ್ರಾನ್ ಲಕ್ಷಣಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಚರ್ಮದ ದುದ್ದು ಕೂಡ ಒಮಿಕ್ರಾನ್ ಲಕ್ಷಣಗಳಲ್ಲಿ ಒಂದಾಗಿದೆ. ಮುಖದ ಮೇಲೆ ಒಮಿಕ್ರಾನ್ ದದ್ದುಗಳನ್ನು ಮೂಡಿಸುವುದರ ಜೊತೆಗೆ ಇದು ತುರಿಕೆ ಸಹ ಉಂಟು ಮಾಡುತ್ತದೆ. ಒಮಿಕ್ರಾನ್ ಸೋಂಕಿಗೆ ಒಳಗಾದ ವಯಸ್ಕರಿಗಿಂತ ಹದಿಹರೆಯದವರಲ್ಲಿ ಚರ್ಮದ ದದ್ದುಗಳ ಸಮಸ್ಯೆ ಹೆಚ್ಚು ಕಂಡು ಬರುತ್ತಿದೆ. ಶೇಕಡಾ 15 ರಷ್ಟು ಸೋಂಕಿಗೆ ಒಳಗಾದ ಹದಿಹರೆಯದವರಲ್ಲಿ ಚರ್ಮದ ದದ್ದು ಸಮಸ್ಯೆಯನ್ನು ಹೊಂದಿರುತ್ತಾರೆ. ಹಾಗೆ ಆಯಾಸ, ತಲೆನೋವು ಮತ್ತು ಹಸಿವಿನ ಸಮಸ್ಯೆ ಕಂಡುಬರುತ್ತಿದೆ ಎಂದು ವೈದ್ಯ ಡೇವಿಡ್ ಲಾಯ್ಡ್ ಹೇಳಿದ್ದಾರೆ.

ಮೂಗು ಸೋರುವುದು, ಗಂಟಲು ನೋವು, ಸೀನು, ಬೆನ್ನು ನೋವು, ಸ್ನಾಯು ನೋವು ಮತ್ತು ರಾತ್ರಿ ಬೆವರುವುದು ಒಮಿಕ್ರಾನ್ ಲಕ್ಷಣಗಳಾಗಿವೆ. ಒಮಿಕ್ರಾನ್ಪ್ ಹರಡದಂತೆ ಕೊರೊನಾದ ಎಲ್ಲಾ ನಿಯಮಗಳನ್ನು ಪಾಲಿಸುವುದು ಮುಖ್ಯವಾಗಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles