ಬೆಂಗಳೂರು: ವರ್ಷದ ಕೊನೆಯ ದಿನವಾದ ನಿನ್ನೆ ರಾಜ್ಯದಲ್ಲಿ ಒಮಿಕ್ರಾನ್ ನ ಪ್ರಕರಣಗಳು ಒಂದೇ ಸಲಕ್ಕೆ ತೀವ್ರ ಹೆಚ್ಚಳವಾಗಿತ್ತು. ಇದೀಗ ಕರೊನಾ ಪ್ರಕರಣದಲ್ಲೂ ಸಹ ತುಂಬಾ ಏರಿಕೆಯಾಗಿದ್ದು, ಜನರಲ್ಲಿ ಆತಂಕವನ್ನು ಉಂಟುಮಾಡಿದೆ.
ರಾಜ್ಯದಲ್ಲಿ ಸುಮಾರು ಮೂರೂವರೆ ತಿಂಗಳ ಬಳಿಕ ಒಂದೇ ದಿನಕ್ಕೆ ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಇಂದು 1033 ಕೋವಿಡ್ ಪ್ರಕರಣ ಪತ್ತೆಯಾಗಿದೆ. ಇದೀಗ ರಾಜ್ಯದಲ್ಲಿ 9386ಕ್ಕೆ ಕೋವಿಡ್-19 ರ ಸಕ್ರಿಯ ಪ್ರಕರಣಗಳ ಸಂಖ್ಯೆ ತಲುಪಿದೆ.
ಇಂದು ಬೆಂಗಳೂರಿನಲ್ಲಿ 810 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಸೆಪ್ಟೆಂಬರ್ 17 ರಂದು 1003 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದಾದ ನಂತರ ಇಂದು ಕೋವಿಡ್ ಮತ್ತೆ ಸಾವಿರದ ಗಡಿ ದಾಟಿದೆ.