ಇತ್ತೀಚಿನ ವರ್ಷಗಳಲ್ಲಿ ವಯಸ್ಸು 35 – 40 ದಾಟುತ್ತಿದ್ದಂತೆ ಬಿಪಿ, ಶುಗರ್, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಹೀಗಾಗಿ ನಮ್ಮ ದೇಹದ ಆರೋಗ್ಯವನ್ನು ಕಾಪಾಡುವಂತಹ ಆಹಾರವನ್ನು ಸೇವಿಸಬೇಕಾಗುತ್ತದೆ. ಈ ಕೆಳಗಿನ ಆಹಾರಗಳನ್ನು 35 – 40 ದಾಟುವವರು ಹೆಚ್ಚಾಗಿ ಸೇವಿಸಿದರೆ ಒಳ್ಳೆಯದು.
ಬಾದಾಮಿ – ಮಧುಮೇಹ ಸಮಸ್ಯೆ ಇರುವವರು ಬಾದಾಮಿ ಬೀಜಗಳನ್ನು ತಿನ್ನುವುದರಿಂದ ದೇಹದಲ್ಲಿನ ಸಕ್ಕರೆಯ ಅಂಶವು ಕಡಿಮೆಯಾಗುತ್ತದೆ. ಹಾಗೇ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದರಿಂದ ಹೃದಯ ಸಂಬಂಧಿ ಖಾಯಿಲೆಗಳಿಂದ ದೂರವಿರಬಹುದು. ಬಾದಾಮಿಯು ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಪಚನಕ್ರಿಯೆ ಸುಧಾರಿಸುತ್ತದೆ. ಹಾಗೂ ಕ್ಯಾನ್ಸರ್ ರೋಗವನ್ನು ತಡೆಗಟ್ಟಬಹುದು.
ಓಟ್ಸ್ – ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುತ್ತದೆ. ಹಾಗೇ ಮಧುಮೇಹ, ಅತಿಸಾರ, ಮಲಬದ್ಧತೆ ಮತ್ತು ಕರುಳಿಗೆ ಸಂಬಂಧಿಸಿದ ಕಾಯಿಲೆಯನ್ನು ತಡೆಗಟ್ಟುತ್ತದೆ.
ಮೀನು – ಮೀನು ತಿನ್ನುವುದರಿಂದ ವಯಸ್ಸಾಗುತ್ತಿದ್ದಂತೆ ಕಾಡುವ ಮರೆವಿನ ಸಮಸ್ಯೆ ಕಡಿಮೆಯಾಗುತ್ತದೆ. ಮೀನಿನಲ್ಲಿ ಒಮೆಗಾ – ೩ ಫ್ಯಾಟಿ ಆಸಿಡ್ ಅಂಶಗಳು ಹೃದಯ ಸಂಬಂಧಿ ತೊಂದರೆ ಇರುವವರು ಸೇವಿಸಿದರೆ ಒಳ್ಳೆಯದು.
ಟೊಮೆಟೋ – ಟೊಮೆಟೋದಲ್ಲಿರುವ ಲೈಕೋಪಿನ ಎಂಬ ಆಂಟಿ ಆಕ್ಸಿಡೆಂಟ್ ಅಂಶಗಳು ಇರುವುದರಿಂದ ದೇಹದಲ್ಲಿ ಕ್ಯಾನ್ಸರ್ ಕೋಶಗಳು ರಚನೆಯಾಗದಂತೆ ಹಾಗೂ ಬೇರೆ ಭಾಗಗಳಿಗೆ ಹರಡದಂತೆ ತಡೆಯುತ್ತದೆ. ಟೊಮೆಟೋ ಜ್ಯೂಸ್ ಕುಡಿಯುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಬೆಳ್ಳುಳ್ಳಿ – ಬೆಳ್ಳುಳ್ಳಿ ಇದು ಕಟುವಾದ ವಾಸನೆಯನ್ನು ಹೊಂದಿದ್ದರೂ ಇದು ದೇಹಕ್ಕೆ ತುಂಬಾ ಉಪಯುಕ್ತವಾದದು. ಇದರಲ್ಲಿ ಕ್ಯಾನ್ಸರ್ ನಂತಹ ದೊಡ್ಡ ಸಮಸ್ಯೆಯಿಂದ ಹಿಡಿದು ಕೆಮ್ಮು, ನೆಗಡಿಯಂತಹ ಸಣ್ಣ ಪುಟ್ಟ ಸಮಸ್ಯೆಗಳ ವಿರುದ್ಧ ಹೋರಾಡುವ ಶಕ್ತಿ ಇದೆ. ಅಧಿಕ ರಕ್ತದೊತ್ತಡ , ಹೃದಯ ಸಂಬಂಧಿ ತೊಂದರೆ , ಕೊಲೆಸ್ಟ್ರಾಲ್, ಹಾಗೂ ಡಿಮೆನ್ಷಿಯಾ ಸಮಸ್ಯೆ ಇರುವವರು ಬೆಳ್ಳುಳ್ಳಿಯನ್ನು ಸೇವಿಸುವುದು ಉತ್ತಮ.
ಅವಕಾಡೊ – ಪ್ರೋಟೀನ್ ಅಂಶ ಹಾಗೂ ದೇಹಕ್ಕೆ ಅಗತ್ಯವಿರುವ ಕೊಬ್ಬಿನ ಅಂಶಗಳು ಅವಕಾಡೊಗಳಲ್ಲಿ ಅಧಿಕವಾಗಿದ್ದು, ಇವುಗಳಲ್ಲಿರುವ ಪೌಷ್ಟಿಕಾಂಶಗಳು ಹೃದಯವನ್ನು ಕಾಪಾಡುತ್ತದೆ. ಹಾಗೂ ವಯಸ್ಸಾದಂತೆ ಬರುವ ಕಣ್ಣಿನ ಸಮಸ್ಯೆಯನ್ನು ದೂರಮಾಡುತ್ತದೆ.
ಬ್ಲೂ ಬೆರ್ರಿ ಹಣ್ಣು – ಈ ಹಣ್ಣನ್ನು ತಿನ್ನುವುದರಿಂದ ದೇಹದ ಅಂಗಾಂಗಗಳ ಚಲನೆ ಹಾಗೂ ಕಾರ್ಯ ಚಟುವಟಿಕೆಯಲ್ಲಿನ ಸಮಸ್ಯೆಗಳಿಂದ ದೂರಮಾಡುತ್ತದೆ. ಇದರಲ್ಲಿ ಕಡಿಮೆ ಕ್ಯಾಲೋರಿಗಳು ಇರುವುದರಿಂದ ದೇಹಕ್ಕೆ ಉತ್ತಮವಾದುದು.