Saturday, June 7, 2025

ಉಳಿದ ಅನ್ನದಿಂದ ಮಾಡಬಹುದು ಅನ್ನದ ಪಕೋಡ

ಕೆಲವೊಮ್ಮೆ ಅನ್ನ ಮಾಡಿದ್ದು ಉಳಿದು ಬಿಡುತ್ತೆ. ಈ ಉಳಿದಿರುವ ಅನ್ನವನ್ನ ಏನು ಮಾಡಬಹುದು ಎನ್ನುವವರು ಅನ್ನದಿಂದ ಮಾಡಿದ ಪಕೋಡನ್ನು ಮಾಡಿ ಉಳಿದ ಅನ್ನವನ್ನ ಸದುಪಯೋಗ ಮಾಡಬಹುದು.

ಅನ್ನದ ಪಕೋಡ ಮಾಡಲು ಬೇಕಾಗುವ ಸಾಮಾಗ್ರಿಗಳು:

  • ಅನ್ನ ೨ ಕಪ್
  • ಕಡಲೇಹಿಟ್ಟು ಅರ್ಧ ಕಪ್
  • ಸಣ್ಣಗೆ ಹೆಚ್ಚಿದ ಈರುಳ್ಳಿ ೨
  • ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ ೪
  • ಸಣ್ಣಗೆ ಹೆಚ್ಚಿದ ಶುಂಠಿ ೧ ಚಮಚ
  • ಎಣ್ಣೆ ೨ ಕಪ್
  • ಚಾಟ್ ಮಸಾಲ ೧ ಚಮಚ
  • ಸಣ್ಣಗೆ ಹೆಚ್ಚಿದ ಪುದೀನಾ ಎಲೆಗಳು ಕಾಲು ಕಪ್
  • ರುಚಿಗೆ ತಕ್ಕಷ್ಟು ಉಪ್ಪು

ಅನ್ನದ ಪಕೋಡ ಮಾಡುವ ವಿಧಾನ:
ಮೊದಲಿಗೆ ಒಂದು ಪಾನ್ ಗೆ ೨ ಕಪ್ ಎಣ್ಣೆ ಹಾಕಿ ಕಾಯಲು ಬಿಡಬೇಕು.
ನಂತರ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಅನ್ನ ೨ ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ ೨, ಸಣ್ಣಗೆ ಹೆಚ್ಚಿದ ಶುಂಠಿ ೧ ಚಮಚ, ಸಣ್ಣಗೆ ಹೆಚ್ಚಿದ ಪುದೀನಾ ಎಲೆಗಳು ಕಾಲು ಕಪ್ , ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ ೪ ಹಾಕಿ ಕಲಸಿದ ನಂತರ ಈ ಮಿಶ್ರಣಕ್ಕೆ ಕಡಲೇ ಹಿಟ್ಟು ಅರ್ಧ ಕಪ್, ಚಾಟ್ ಮಸಾಲ ೧ ಚಮಚ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿಟ್ಟುಕೊಳ್ಳಿ.

ಎಣ್ಣೆ ಕಾದ ನಂತರ ಈಗಾಗಲೇ ಮಾಡಿಟ್ಟುಕೊಂಡಿರುವ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಕಾದ ಎಣ್ಣೆಯಲ್ಲಿ ಬಿಡಿ. ಈ ಉಂಡೆಗಳು ಚಿನ್ನದ ಬಣ್ಣಕ್ಕೆ ಬರುವವರೆಗೂ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿದರೆ ಅನ್ನದ ಪಕೋಡ ಸವಿಯಲು ಸಿದ್ಧ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles