ಚಳಿಗಾಲದಲ್ಲಿ ನಮ್ಮ ದೇಹದ ಆರೋಗ್ಯದಲ್ಲಿ ಏರುಪೇರು ಉಂಟಾಗುವುದು ಹಾಗೂ ನಮ್ಮ ದೇಹದ ಚರ್ಮವು ತೇವಾಂಶವನ್ನು ಕಳೆದುಕೊಂಡು ಒಣಗಿದಂತಾಗುವುದು ಸಾಮಾನ್ಯ. ಇಂತಹ ಚರ್ಮದ ಸಮಸ್ಯೆಗಳನ್ನು ನಾವು ಅಲೋವೆರಾ ಜೆಲ್ ಬಳಸುವ ಮೂಲಕ ದೂರಮಾಡಬಹುದಾಗಿದೆ.
ಅಲೋವೆರಾದ ಪ್ರಯೋಜನಗಳು:
- ಪ್ರತಿದಿನ ರಾತ್ರಿ ಚೆನ್ನಾಗಿ ಮುಖ ತೊಳೆದು ಅಲೋವೆರಾ ಜೆಲ್ ಅನ್ನು ಹಚ್ಚುವುದರಿಂದ ಕ್ರಮೇಣ ಮುಖದಲ್ಲಿನ ಮೊಡವೆಗಳು, ಸುಟ್ಟ ಗಾಯಗಳು, ಚರ್ಮ ಕತ್ತರಿಸಿ ಹೋದ ಸಾಧ್ಯತೆಗಳು, ಚರ್ಮದ ಮೇಲಿನ ದದ್ದುಗಳು ಕಡಿಮೆಯಾಗುತ್ತದೆ.
- ಚರ್ಮದ ಮೇಲಿರುವ ಸತ್ತ ಜೀವಕೋಶಗಳನ್ನು ತೆಗೆದುಹಾಕುವುದರ ಜೊತೆಗೆ ಚರ್ಮ ಸುಕ್ಕುಗಟ್ಟುವುದನ್ನು ಚರ್ಮದ ಮೇಲಿನ ಸಣ್ಣ ಗೆರೆಗಳನ್ನು ಕಡಿಮೆ ಮಾಡುತ್ತದೆ.
- ಚಳಿಗಾಲದಲ್ಲಿ ತುಂಬಾ ಬೇಗನೆ ಚರ್ಮದಲ್ಲಿನ ತೇವಾಂಶವು ಕಡಿಮೆಯಾಗಿ ಚರ್ಮ ಒಣಗಿದಂತೆ ಆಗುತ್ತದೆ. ಅಲೋವೆರಾ ಜೆಲ್ ಅನ್ನು ಪ್ರತಿನಿತ್ಯ ಬಳಸುವುದರಿಂದ ಚರ್ಮ ಒಣಗುವುದನ್ನು ಕಡಿಮೆಮಾಡುವುದರ ಜೊತೆಗೆ ಚರ್ಮದಲ್ಲಿನ ತೇವಾಂಶವನ್ನು ಕಾಪಾಡುತ್ತದೆ.
ಅಲೋವೆರಾ ಜೆಲ್ ನಿಂದ ಫೇಸ್ ಪ್ಯಾಕ್ ತಯಾರಿಸಿ ಚರ್ಮದ ಮೇಲೆ ಹಚ್ಚುವುದರಿಂದ ಚರ್ಮವು ಮೃದು ಆಗುವುದರ ಜೊತೆಗೆ ಚರ್ಮದ ಕಾಂತಿ ಹೆಚ್ಚಾಗುತ್ತದೆ.
ಫೇಸ್ ಪ್ಯಾಕ್ ಮಾಡುವ ವಿಧಾನ: ಒಂದು ಚಮಚ ಅಲೋವೆರಾ ಜೆಲ್, ಒಂದು ಚಮಚ ಜೇನುತುಪ್ಪ, ಒಂದು ಚಮಚ ಮೊಸರು, 1 ಚಮಚ ರೋಸ್ ವಾಟರ್ ಇವೆಲ್ಲವನ್ನು ಮಿಶ್ರಣ ಮಾಡಿ ಮುಖದ ಮೇಲೆ ಹಚ್ಚಿ ಎರಡು ನಿಮಿಷ ಮಸಾಜ್ ಮಾಡಬೇಕು. ನಂತರ 15-20 ನಿಮಿಷ ಬಿಟ್ಟು ಮುಖವನ್ನು ಉಗುರುಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.