Sunday, June 8, 2025

ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಾಳೆಯಿಂದ ಕೆಲವೆಡೆ ಆನ್‌ಲೈನ್‌ ತರಗತಿ

ಬೆಂಗಳೂರು: ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಲೇ ಇದೆ. ಇದರಿಂದ 2021-22 ನೇ ಸಾಲಿನಲ್ಲಿ ಶಾಲೆಗಳನ್ನು ಆನ್‌ಲೈನ್‌ ಅಥವಾ ಆಫ್ ಲೈನ್‌ ಇವೆರಡರಲ್ಲಿ ಶಾಲೆಗಳಿಗೆ ಅನುಕೂಲವಾಗುವ ಯಾವುದೇ ವಿಧಾನದಲ್ಲಿ ತರಗತಿಗಳನ್ನು ನಡೆಸಲು ಸರಕಾರ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಜನವರಿ 6 ರಿಂದಲೇ ಬೆಂಗಳೂರು ಸಹಿತ ವಿವಿಧ ಭಾಗಗಳ ಕೆಲವು ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿಗಳನ್ನು ನಡೆಸಲು ನಿರ್ಧಾರ ಮಾಡಿದ್ದು ವಿದ್ಯಾರ್ಥಿಗಳಿಗೆ ಶಾಲೆಗೆ ಬಾರದಂತೆ ಸೂಚನೆ ನೀಡಿವೆ.

ಕೆಲವು ಶಿಕ್ಷಕರು ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲವು ಶಿಕ್ಷಕರು ತಾಂತ್ರಿಕವಾಗಿ ಕೌಶಲ ಹೊಂದಿರುವುದಿಲ್ಲ, ಇದರಿಂದ ಮನೆಯಿಂದ ಆನ್‌ಲೈನ್‌ ಪಾಠ ಮಾಡುವ ವೇಳೆಯಲ್ಲಿ ಬೋಧನೆ ಜತೆಗೆ ವೀಡಿಯೋಗಳ ಎಡಿಟಿಂಗ್‌ ಜೊತೆಗೆ ಹಲವು ತಾಂತ್ರಿಕ ಕೆಲಸಗಳು ಇರುತ್ತವೆ. ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವ ಹಾಗೆ ಮನೆಯಿಂದ ಪಾಠ ಮಾಡಲು ಸಾಧ್ಯವಾಗುವುದಿಲ್ಲ. ಕೆಲವು ಶಿಕ್ಷಕರು ಚಿಕ್ಕ ಮನೆಗಳಲ್ಲಿ ವಾಸವಾಗಿರುತ್ತಾರೆ. ಮನೆಯಲ್ಲಿರುವ ಇತರರು ಇವರಿಗಾಗಿ ಪ್ರಶಾಂತವಾಗಿ ಕುಳಿತುಕೊಳ್ಳಬೇಕಾಗುತ್ತದೆ. ಆದ್ದರಿಂದ ಶಾಲೆಯಲ್ಲಿಯೇ ಪಾಠ ಮಾಡಲು ಅನುಕೂಲ ಕಲ್ಪಿಸಿ ಕೊಡಬೇಕು ಎಂದು ಆನ್‌ಲೈನ್‌ ತರಗತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles