ಬಿಳಿ ಕೂದಲೂ ವಯಸ್ಸಾದವರಿಗೆ ಮಾತ್ರ ಬರುವುದಿಲ್ಲ ಜೊತೆಗೆ ಚಿಕ್ಕ ವಯಸ್ಸಿನವರಿಗೂ ಬರಬಹುದು. ಇತ್ತೀಚಿನ ವರ್ಷಗಳಲ್ಲಿ ಚಿಕ್ಕ ವಯಸ್ಸಿಗೇ ಬಿಳಿ ಕೂದಲು ಬರುವುದು ಸಾಮಾನ್ಯವಾಗಿಬಿಟ್ಟಿದೆ. ಆದರೆ ಆ ಬಿಳಿ ಕೂದಲನ್ನು ಕಪ್ಪಾಗಿಸಲು ಕೆಲವರು ಹಲವಾರು ರೀತಿಯ ಸರ್ಕಸ್ ಮಾಡುತ್ತಾರೆ.
ಕೆಲವು ರಾಸಾಯನಿಕ ಆಹಾರಗಳನ್ನು ಸೇವಿಸುವುದರಿಂದ ಹಾಗೇ ರಾಸಾಯನಿಕ ವಸ್ತುಗಳನ್ನು ಬಳಸುವುದರಿಂದ ಕಪ್ಪು ಕೂದಲು ಬಿಳಿಯಾಗುತ್ತದೆ. ಹಾಗಾದರೆ ಈ ಬಿಳಿ ಕೂದಲನ್ನು ಕಪ್ಪಾಗಿಸುವುದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
• ತಲೆ ಕೂದಲು ಉದುರಬಾರದು ಎಂಬುವವರು ಕೊಬ್ಬರಿ ಎಣ್ಣೆ ಜೊತೆಗೆ ಕರಿಬೇವಿನ ಎಲೆಯ ಪುಡಿಯನ್ನು ಬೆರೆಸಿ ತಲೆಗೆ ಹಚ್ಚಬೇಕು.
• ತಲೆ ಕೂದಲು ಕಪ್ಪಾಗಬೇಕು ಎಂದು ಬಯಸುವವರು ಕರಿಬೇವಿನ ಸೊಪ್ಪಿನ ಪುಡಿ, ಕರಿ ಎಳ್ಳಿನ ಪುಡಿ, ನೆಲ್ಲಿಕಾಯಿ ರಸ, ಮೆಹಂದಿ ಸೊಪ್ಪಿನ ಪುಡಿ, ಕಾಳುಮೆಣಸಿನ ಪುಡಿ ಮತ್ತು ಟೀ ಪುಡಿ ಇವೆಲ್ಲವನ್ನು ಮಿಶ್ರಣ ಮಾಡಿ ಈ ಮಿಶ್ರಣವನ್ನು ನೀರಿಗೆ ಹಾಕಿ ಒಂದು ದಿನ ರಾತ್ರಿ ನೆನೆಸಬೇಕು. ನಂತರ ಮಾರನೆಯ ದಿನ ಈ ಮಿಶ್ರಣವನ್ನು ತಲೆಗೆ ಹಚ್ಚಿಕೊಳ್ಳಬೇಕು. ಆದರೆ ತಲೆಗೆ ಹಚ್ಚುವ ಮುನ್ನ ಈ ಮಿಶ್ರಣವನ್ನು ಬಿಸಿ ಮಾಡಿಕೊಳ್ಳಬೇಕು. ಇದು ತಣ್ಣಗಾದ ನಂತರ ತಲೆಯ ಬಿಳಿ ಕೂದಲು ಇರುವ ಭಾಗಗಳಲ್ಲಿ ಹಚ್ಚಿಕೊಳ್ಳಬೇಕು.
ಈ ಮಿಶ್ರಣವನ್ನು ತಲೆಗೆ ಹಚ್ಚಿಕೊಂಡು ಒಂದರಿಂದ ಎರಡು ಗಂಟೆ ಬಿಸಿಲಿನಲ್ಲಿ ಇರಬೇಕು. ನಂತರ ತಲೆ ಸ್ನಾನ ಮಾಡಿದರೆ ಎರಡರಿಂದ ಮೂರು ದಿನಗಳಲ್ಲಿ ಕೂದಲು ಕಪ್ಪಾಗುತ್ತದೆ.