ಪ್ರಸ್ತುತ ಹಲವಾರು ದೇಶಗಳಲ್ಲಿ ಕೊರೊನಾ ಹಾಗೂ ಅದರ ರೂಪಾಂತರಿ ಒಮಿಕ್ರಾನ್ ನ ಸೋಂಕಿನ ಪ್ರಮಾಣ ಉಲ್ಭಣವಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು ಒಮಿಕ್ರಾನ್ ರೂಪಾಂತರಿಯನ್ನ “ಕೇವಲ ಸೌಮ್ಯ ಕಾಯಿಲೆ” (ಮೈಲ್ಡ್ ಡಿಸೀಸ್) ಎಂದು ಸೂಚಿಸುವುದು ಅಪಾಯಕಾರಿ ಎಂದು ಹೇಳಿದೆ.
ಒಮಿಕ್ರಾನ್ ಗೆ ಅತಿ ಸರಳೀಕೃತ ಹೇಳಿಕೆಯನ್ನು ನೀಡುವುದು ಅಪಾಯಕಾರಿ. ಡೆಲ್ಟಾಕ್ಕೆ ಹೋಲಿಸಿದರೆ, ಒಮಿಕ್ರಾನ್ ಸೋಂಕು ಪತ್ತೆಯಾದವರಲ್ಲಿ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ಕಡಿಮೆ ಇರಬಹುದು, ಹಾಗೂ ಈ ಸೋಂಕು ತಗುಲಿದವರಿಗೆ ಅಪಾಯ ಕಡಿಮೆ. ಹೀಗಂದ ಮಾತ್ರಕ್ಕೆ ಒಮಿಕ್ರಾನ್ ಕೇವಲ ಸೌಮ್ಯ ಕಾಯಿಲೆ ಎಂದು ಹೇಳಳುವುದು ತುಂಬಾ ಅಪಾಯಕಾರಿ. ಕಡಿಮೆ ಅಪಾಯವಿದೆ ಎಂದು ಜಾಗ್ರತೆ ವಹಿಸದೆ ಇದ್ದಲ್ಲಿ ಅಪಾಯ, ಇದರಿಂದ ಸೋಂಕಿನ ಪ್ರಮಾಣ ಹೆಚ್ಚಾಗಿ ಆಸ್ಪತ್ರೆಗಳಲ್ಲಿ ಜಾಗ ಇರದಂತ ಪರಿಸ್ಥಿತಿ ಉಂಟಾಗಬಹುದು ಆದ್ದರಿಂದ ಜಾಗರೂಕರಾಗಿರಿ ಎಂದು ಸಾಂಕ್ರಾಮಿಕ ರೋಗಗಳ ತಜ್ಞೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್ ತಾಂತ್ರಿಕ ಸಮಿತಿಯ ಪ್ರಮುಖ ಸದಸ್ಯೆ, ಮಾರಿಯಾ ವ್ಯಾನ್ ಕೆರ್ಖೋವ್ ಒಮಿಕ್ರಾನ್ ಬಗ್ಗೆ ಆತಂಕ ಹೊರಹಾಕಿದ್ದಾರೆ.