ಡಿಸೆಂಬರ್ 17 ರಂದು ತೆರೆಕಂಡಿದ್ದ ಸ್ಟಾರ್ ನಟ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾವು ಇದುವರೆಗೆ 190.84 ಕೋಟಿ ಗಳಿಕೆ ಮಾಡಿದ್ದು, ಇದೀಗ ಓಟಿಟಿಯಲ್ಲು ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ಐದು ಭಾಷೆಗಳಲ್ಲಿ ತೆರೆಕಂಡ ಈ ಸಿನಿಮಾ 100 ಕೋಟಿ ದಾಟಿದ ಅಲ್ಲು ಅರ್ಜುನ್ ರ ಎರಡನೇ ಸಿನಿಮಾವಾಗಿದೆ.
‘ಪುಷ್ಪ’ ಸಿನಿಮಾವು ಓಟಿಟಿ ವೇದಿಕೆ ಅಮೇಜಾನ್ ಪ್ರೈಮ್ ನಲ್ಲಿ ಜನವರಿ 7 ರಂದು ತೆರೆಕಾಣಲಿದೆ. ಹಾಗೂ ಇದನ್ನು 27-30 ಕೋಟಿ ರೂಪಾಯಿಗೆ ಖರೀದಿ ಮಾಡಿದೆ ಎಂದು ದಿ ಟ್ರೇಡ್ ಇನ್ಸೈಡರ್ ತಿಳಿಸಿದೆ. ಓಟಿಟಿಯಲ್ಲಿ ಕೇವಲ ಒಂದು ಭಾಷೆಯಲ್ಲಿ ಮಾತ್ರವಲ್ಲದೆ ತೆಲುಗು, ಕನ್ನಡ, ಮಲಯಾಲಂ ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.
ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಾಹದ್ ಫಜಿಲ್, ಡಾಲಿ ಧನಂಜಯ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಪುಷ್ಪ ಸಿನಿಮಾದ ಮೊದಲ ಭಾಗವು ಡಿಸೆಂಬರ್ 17 ರಂದು ತೆರೆಕಂಡಿದ್ದು, ಎರಡನೇ ಭಾಗವು 2022ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.