Saturday, June 7, 2025

ಪಾಲಾಕ್ ಸೊಪ್ಪಿನ ಪಪ್ಪು/ಸಾಂಬಾರ್ ಮಾಡುವ ಸುಲಭ ವಿಧಾನ ಇಲ್ಲಿದೆ

ಪಾಲಾಕ್ ಸೊಪ್ಪಿನ ಪಪ್ಪು ಅಥವಾ ಸಾಂಬಾರ್ ಮಾಡಲು ಬೇಕಾಗುವ ಸಾಮಾಗ್ರಿಗಳು:

  • ತೊಗರಿಬೇಳೆ ಅರ್ಧ ಕಪ್
  • 1 ಕಪ್ ಹೆಚ್ಚಿದ ಪಾಲಾಕ್ ಸೊಪ್ಪು
  • ಹೆಚ್ಚಿದ ಟೊಮೆಟೊ ಮುಕ್ಕಾಲು ಕಪ್
  • ಹಸಿಮೆಣಸು 4
  • ಸಣ್ಣಗೆ ಹೆಚ್ಚಿದ ಈರುಳ್ಳಿ 1
  • ಕೊತ್ತಂಬರಿ ಸೊಪ್ಪು 2 ಚಮಚ
  • ಬೆಳ್ಳುಳ್ಳಿ 10 ಎಸಳು
  • ಕರಿಬೇವಿನ ಎಲೆಗಳು 10
  • ಸಾಂಬಾರ್ ಪುಡಿ ಒಂದುವರೆ ಚಮಚ (ಸಾಂಬಾರ್ ಪುಡಿ ಬದಲು ಖಾರದ ಪುಡಿಯನ್ನೂ ಬಳಸಿಕೊಳ್ಳಬಹುದು)
  • ರುಚಿಗೆ ತಕ್ಕಷ್ಟು ಉಪ್ಪು
  • ಅರಶಿನ ಚಿಟಿಕೆ
  • 1 ಚಮಚ ಎಣ್ಣೆ
  • 1 ಚಮಚ ಜೀರಿಗೆ ಪುಡಿ ಅಥವಾ ಜೀರಿಗೆ

ಪಾಲಾಕ್ ಸೊಪ್ಪಿನ ಪಪ್ಪು ಮಾಡುವ ವಿಧಾನ:

ಮೊದಲಿಗೆ ಒಂದು ಕುಕ್ಕರ್ ಗೆ ಅರ್ಧ ಕಪ್ ತೊಗರಿಬೇಳೆಯನ್ನು ತೊಳೆದು ಹಾಕಿ. (ಇದರೊಂದಿಗೆ ಸ್ವಲ್ಪ ಹೆಸರುಬೇಳೆಯನ್ನು ಹಾಕಿಕೊಳ್ಳಬಹುದು). ನಂತರ ಇದಕ್ಕೆ ಹೆಚ್ಚಿದ ಟೊಮೆಟೊ ಮುಕ್ಕಾಲು ಕಪ್, ಉದ್ದಕ್ಕೆ ಸೀಳಿದ ಹಸಿಮೆಣಸು 4, ಸಣ್ಣಗೆ ಹೆಚ್ಚಿದ ಈರುಳ್ಳಿ 1, ಕೊತ್ತಂಬರಿ ಸೊಪ್ಪು 2 ಚಮಚ, ಬೆಳ್ಳುಳ್ಳಿ 10 ಎಸಳು, ಕರಿಬೇವಿನ ಎಲೆಗಳು 10, ಸಾಂಬಾರ್ ಪುಡಿ ಒಂದುವರೆ ಚಮಚ, ಚಿಟಿಕೆ ಅರಶಿನ ಹಾಗೂ 3 ರಿಂದ 4 ಕಪ್ ನೀರು ಹಾಕಿ.

ನಂತರ ಕುಕ್ಕರ್ ಗೆ 1 ಚಮಚ ಜೀರಿಗೆ ಅಥವಾ ಇಂದು ಚಮಚ ಜೀರಿಗೆ ಪುಡಿ, ಒಂದು ಚಮಚ ಎಣ್ಣೆ ಹಾಗಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಇದರ ಮೇಲೆ 1 ಕಪ್ ಹೆಚ್ಚಿದ ಪಾಲಾಕ್ ಸೊಪ್ಪು ಹಾಕಿ ಮುಚ್ಚಳ ಮುಚ್ಚಿ 3 ರಿಂದ 4 ಕೂಗು ಕೂಗಿಸಿ.

3 ಕೂಗು ಕೂಗಿದ ನಂತರ ಮುಚ್ಚುಳ ತೆಗೆದು ಅಗತ್ಯವಿರುವಷ್ಟು ಉಪ್ಪು ಹಾಕಿ ಚೆನ್ನಾಗಿ ಕೈಯಾಡಿಸಿ ಚೆನ್ನಾಗಿ ಸ್ಮಾಷ್ ಮಾಡಿಕೊಳ್ಳಿ.

ನಂತರ ಒಂದು ಪಾನ್ ಗೆ 1 ಚಮಚ ಎಣ್ಣೆ ಅಥವಾ ತುಪ್ಪ ಹಾಕಿ ಅದು ಬಿಸಿಯಾದ ಮೇಲೆ ಅದಕ್ಕೆ ಸಾಸಿವೆ 1 ಚಮಚ, ಜೀರಿಗೆ 1 ಚಮಚ, ಕರಿಬೇವಿನ ಎಲೆ 10, ಸಣ್ಣಗೆ ತುಂಡುಮಾಡಿಕೊಂಡ 2 ಒಣಮೆಣಸಿನ ಕಾಯಿ, ಬೆಳ್ಳುಳ್ಳಿ 3 ಎಸಳು ಹಾಗೇ ಚಿಟಿಕೆ ಇಂಗು ಹಾಕಿ ಒಗ್ಗರಣೆ ಮಾಡಿ ಇದನ್ನು ಪಪ್ಪು ಅಥವಾ ಸಾಂಬಾರ್ ಗೆ ಹಾಕಿದರೆ ಪಾಲಾಕ್ ಪಪ್ಪು ಅಥವಾ ಸಾಂಬಾರ್ ತಯಾರಾಗುತ್ತದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles