Saturday, June 7, 2025

ಸುಪ್ರೀಂ ಕೋರ್ಟ್ ನ ಮೊಟ್ಟ ಮೊದಲ ಮಹಿಳಾ ನ್ಯಾಯಾಧೀಶೆಯಾಗಿ ಆಯೇಷಾ ಮಲಿಕ್ ಆಯ್ಕೆ

ಇಸ್ಲಮಾಬಾದ್: ಪಾಕಿಸ್ತಾನದ ಸುಪ್ರೀಂ ಕೋರ್ಟ್‍ನ ನ್ಯಾಯಾಮೂರ್ತಿಯಾಗಿ ಲಾಹೋರ್ ಹೈಕೋರ್ಟ್‍ನ ನ್ಯಾಯಮೂರ್ತಿ ಆಯಿಷಾ ಮಲಿಕ್ ಅವರನ್ನು ಆಯ್ಕೆಮಾಡಲಾಗಿದೆ. ಇವರು ಸುಪ್ರೀಂ ಕೋರ್ಟ್‍ನ ಮೊಟ್ಟ ಮೊದಲ ಮಹಿಳಾ ನ್ಯಾಯಾಮೂರ್ತಿಯಾಗಿದ್ದಾರೆ.

ಚೀಫ್ ಜಸ್ಟಿಸ್ ಗುಲ್ಜಾರ್ ಅಹ್ಮದ್ ನೇತೃತ್ವದಲ್ಲಿ ಪಾಕಿಸ್ತಾನ ನ್ಯಾಯಾಂಗ ಆಯೋಗ(ಜೆಸಿಪಿ) ಸಭೆನಡೆಸಿದ್ದು, ನ್ಯಾಯಮೂರ್ತಿ ಆಯಿಷಾ ಮಲಿಕ್ ಅವರು ನಾಲ್ವರ ವಿರುದ್ಧ ಐದು ಬಹುಮತ ಪಡೆದಿದ್ದಾರೆ. ಆದ್ದರಿಂದ ನ್ಯಾಯಮೂರ್ತಿ ಆಯಿಷಾ ಮಲಿಕ್ ಅವರನ್ನು ನ್ಯಾಯಾಮೂರ್ತಿಯಾಗಿ ನೇಮಕ ಮಾಡಲಾಗಿದೆ. 

ಜೆಸಿಪಿ ಯು ನ್ಯಾಯಮೂರ್ತಿ ಆಯಿಷಾ ಮಲಿಕ್ ಅವರ ಬಡ್ತಿಗೆ ಸಂಬಂಧಿಸಿದಂತೆ ಎರಡನೇ ಬಾರಿ ನಡೆಸುತ್ತಿರುವ ಸಭೆ ಇದಾಗಿದ್ದು, 2021 ರ ಸೆಪ್ಟೆಂಬರ್ 9 ರಂದು ಮೊದಲ ಬಾರಿಗೆ ಆಯಿಷಾ ಮಲಿಕ್ ಅವರ ಹೆಸರನ್ನು ಆಯ್ಕೆ ಮಾಡಲಾಗಿತ್ತು. ಆದರೆ ನಾಲ್ವರ ವಿರುದ್ಧ ಸಮಾನ ಮತಗಳನ್ನು ಪಡೆದಿದ್ದ ಕಾರಣ ಅವರ ಹೆಸರನ್ನು ನಿರಾಕರಿಸಲಾಗಿತ್ತು.

ಆಯಿಷಾ ಮಲಿಕ್ ಅವರನ್ನು ಸೀನಿಯಾರಿಟಿಯ ಆಧಾರದಲ್ಲಿ ನೇಮಕ ಮಾಡಲಾಗಿದ್ದು, ಪಾಕಿಸ್ತಾನದ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ಲತೀಫ್ ಅಫ್ರಿದಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗೂ ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅಫ್ರಿದಿ ಅವರು ನ್ಯಾಯಮೂರ್ತಿ ಆಯಿಷಾ ಮಲಿಕ್ ಅವರು ದೇಶದ ಐದು ಹೈಕೋರ್ಟ್‍ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅನೇಕ ನ್ಯಾಯಾಧೀಶರಿಗಿಂತ ಕಿರಿಯ ನ್ಯಾಯಮೂರ್ತಿ ಆಗಿದ್ದಾರೆ ಎಂದರು. ಹಾಗೆ ಅವರ ಹೆಸರನ್ನು ಆಯ್ಕೆ ಮಾಡಿರುವುದಕ್ಕೆ ಕೋರ್ಟ್ ಕಲಾಪ ಬಹಿಷ್ಕರಿಸುವುದಾಗಿ ಹೇಳಿದ್ದರು. ಜೆಸಿಪಿ ಅನುಮೋದನೆಯ ನಂತರ ಆಯಿಷಾ ಅವರ ಹೆಸರನ್ನು ಸಂಸದೀಯ ಸಮಿತಿ ಪರಿಗಣಿಸಲಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles