Sunday, June 8, 2025

ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ

ದೆಹಲಿ:  ಭಾರತ ಸರ್ಕಾರವು ಜನವರಿ 11ರಿಂದ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಪರಿಷ್ಕರಿಸಿದ ಹೊಸ ಮಾರ್ಗಸೂಚಿಯನ್ನು ಬಿಡುಗಡೆಮಾಡಿದೆ. ಇದರ ಅನುಸಾರ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರು 7 ದಿನಗಳ ಕಾಲ ಕ್ವಾರಂಟೈನ್ ಆಗಬೇಕು. ಹೆಚ್ಚು ಕೊವಿಡ್ ಪ್ರಕರಣಗಳಿರುವ ದೇಶದಿಂದ ಬರುವ ಅಥವಾ ಪ್ರಯಾಣಿಸುವ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಗಳು ಅವರು ಬಂದ ನಂತರ ಖಡ್ಡಾಯವಾಗಿ ಅವರಿಗೆ ಕೊವಿಡ್ ಪರೀಕ್ಷೆಗೆ ಮಾಡಲಾಗುತ್ತದೆ. ವರದಿ ನೆಗೆಟಿವ್ ಬಂದರೆ ಕೇವಲ ಕ್ವಾರಂಟೈನ್ ಆಗಬೇಕು. ಒಂದು ವೇಳೆ ಪಾಸಿಟಿವ್ ಬಂದಲ್ಲಿ ಕಟ್ಟುನಿಟ್ಟಾದ ಪ್ರತ್ಯೇಕ ಪ್ರೋಟೋಕಾಲ್‌ಗಳಿಗೆ ಒಳಪಡುತ್ತಾರೆ.

ವರದಿ ನೆಗೆಟಿವ್ ಆಗಿದ್ದರೆ ಭಾರತಕ್ಕೆ ಬಂದ 8 ನೇ ದಿನದಂದು RTPCR ಪರೀಕ್ಷೆ ಮಾಡಿಸಿಕೊಳ್ಳಬೇಕು. ಹಾಗೂ ಏರ್ ಸುವಿಧಾ ಪೋರ್ಟಲ್‌ನಲ್ಲಿ ಪ್ರಯಾಣಿಕರು 8ನೇ ದಿನದಂದು ಮಾಡಿದ RTPCR ಪರೀಕ್ಷೆಯ ವರದಿಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.

ಏರ್ ಸುವಿಧಾ ಪೋರ್ಟಲ್‌ನಲ್ಲಿ ಕಳೆದ 14 ದಿನಗಳ ಪ್ರಯಾಣದ ವಿವರಗಳನ್ನು https://www.newdelhiairport.in/airsuvidha/apho registration ನಲ್ಲಿ ನೋಂದಾಯಿಸಬೇಕು. ನೆಗೆಟಿವ್ ಕೊವಿಡ್- 19 RTPCR ವರದಿಯನ್ನು ಅಪ್‌ಲೋಡ್ ಮಾಡಿ. ಪ್ರಯಾಣ ಮಾಡುವ ಮೊದಲು 72 ಗಂಟೆಗಳ ಒಳಗೆ ಪರೀಕ್ಷೆಯನ್ನು ಮಾಡಿಸಿಕೊಂಡಿರಬೇಕು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles