ದೇಶದಲ್ಲಿ ಇಂದು 149986 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದೆ. ಇಂದು ಸೋಂಕಿಗೆ 285 ಜನರು ಮೃತರಾಗಿದ್ದಾರೆ. 3071ಕ್ಕೆ ದೇಶದಲ್ಲಿನ ಒಮಿಕ್ರಾನ್ ಪ್ರಕರಣ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ 876 ಒಮಿಕ್ರಾನ್ ಪ್ರಕರಣಗಳು ಕಂಡುಬಂದಿದ್ದು, ದೇಶದಲ್ಲೇ ಅತಿ ಹೆಚ್ಚು ಒಮಿಕ್ರಾನ್ ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗಿದೆ. ದೆಹಲಿಯಲ್ಲಿ 513, ಕರ್ನಾಟಕದಲ್ಲಿ 333, ರಾಜಸ್ಥಾನದಲ್ಲಿ 291, ಕೇರಳದಲ್ಲಿ 284, ಗುಜರಾತ್ ನಲ್ಲಿ 204 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ.
ಕೇಂದ್ರ ಆರೋಗ್ಯ ಸಚಿವಾಲಯ ಒಮಿಕ್ರಾನ್ ಸೇರಿದಂತೆ ಇದುವರೆಗೆ ದೇಶದಲ್ಲಿ 3,53,68,372ಕ್ಕೆ ಒಟ್ಟು ಪ್ರಕರಣಗಳು ಏರಿಕೆಯಾಗಿದೆ ಎಂದು ತಿಳಿಸಿದೆ.