ಕೊವಿಡ್ 19 ದಿನದಿಂದ ದಿನಕ್ಕೆ ಹೊಸ ಹೊಸ ರೂಪವನ್ನು ಪಡೆಯುತ್ತಿದೆ. ಈಗಾಗಲೇ ರೂಪಾಂತರಗೊಂಡ ಡೆಲ್ಟಾ ಮತ್ತು ಒಮಿಕ್ರಾನ್ ಜನರಲ್ಲಿ ಆತಂಕ ಸೃಷ್ಟಿಸಿವೆ. ಒಮಿಕ್ರಾನ್ನ ಬಹಳ ವೇಗವಾಗಿ ಹರಡುತ್ತಿದೆ. ಈ ಸಂದರ್ಭದಲ್ಲಿ ಯುರೋಪ್ನ ದ್ವೀಪ ರಾಷ್ಟ್ರವಾದ ಸೈಪ್ರಸ್ನಲ್ಲಿ ಕೊವಿಡ್ 19ನ ಮತ್ತೊಂದು ಹೊಸ ರೂಪಾಂತರಿ ಕಾಣಿಸಿಕೊಂಡಿದೆ. ಇಲ್ಲಿ 25 ಡೆಲ್ಟಾಕ್ರಾನ್ ಪ್ರಕರಣಗಳು ವರದಿಯಾಗಿದೆ. ಇದನ್ನು ಡೆಲ್ಟಾ ಮತ್ತು ಒಮಿಕ್ರಾನ್ ವೈರಸ್ಗಳ ಸಂಯೋಜಿತ ರೂಪಾಂತರಿ ಎನ್ನಲಾಗುತ್ತಿದೆ. ಈ ರೂಪಾಂತರಿಗೆ ಡೆಲ್ಟಾಕ್ರಾನ್ ಎಂದು ಹೆಸರಿಡಲಾಗಿದೆ. ಈ ಕುರಿತು ಸೈಪ್ರಸ್ ವಿಶ್ವವಿದ್ಯಾನಿಲಯದಲ್ಲಿ ಜೈವಿಕ ವಿಜ್ಞಾನಗಳ ಪ್ರಾಧ್ಯಾಪಕ ಮತ್ತು ಜೈವಿಕ ತಂತ್ರಜ್ಞಾನ ಮತ್ತು ಆಣ್ವಿಕ ವೈರಾಲಜಿಯ ಪ್ರಯೋಗಾಲಯದ ಮುಖ್ಯಸ್ಥರಾದ ಲಿಯೊಂಡಿಯೊಸ್ ಕೊಸ್ಟ್ರಿಕಿಸ್ ಅವರು ಮಾಹಿತಿ ನೀಡಿದ್ದಾರೆ.