ಪೈನಾಪಲ್ ಪಾಯಸ ಮಾಡಲು ಬೇಕಾಗುವ ಸಾಮಾಗ್ರಿಗಳು:
- ಸಣ್ಣಗೆ ಹೆಚ್ಚಿದ ಪೈನಾಪಲ್ 1 ಕಪ್
- ಸಕ್ಕರೆ ಕಾಲು ಕಪ್
- ತೆಂಗಿನಕಾಯಿ ಹಾಲು 2 ಕಪ್
- 4 ಚಮಚ ತುಪ್ಪ
- 10 ಗೋಡಂಬಿ
- 1 ಚಮಚ ಕಾರ್ನ್ಫ್ಲೋರ್
ಪೈನಾಪಲ್ ಪಾಯಸ ಮಾಡುವ ವಿಧಾನ:
ಮೊದಲಿಗೆ ಒಂದು ಪಾನ್ ಗೆ 2 ಚಮಚ ತುಪ್ಪ ಹಾಕಿ ಅದಕ್ಕೆ ಸಣ್ಣಗೆ ಹೆಚ್ಚಿದ ಪೈನಾಪಲ್ ಅನ್ನು ಹಾಕಿ ಹುರಿದು ಎತ್ತಿಟ್ಟುಕೊಳ್ಳಿ. ತದನಂತಹ ಅದೇ ಪಾನ್ ಗೆ 2 ಚಮಚ ತುಪ್ಪ ಹಾಕಿ ಗೋಡಂಬಿಯನ್ನು ಹಾಕಿ ಹುರಿದು ಎತ್ತಿಟ್ಟುಕೊಳ್ಳಿ.
ಈಗ ಒಂದು ಪಾತ್ರೆಗೆ ತೆಂಗಿನಕಾಯಿಯ ಹಾಲು 2 ಕಪ್, ಸಕ್ಕರೆ ಕಾಲು ಕಪ್, ಹಾಗೂ ಒಂದು ಚಮಚ ಕಾರ್ನ್ಫ್ಲೋರ್ ಹಾಕಿ ಸಣ್ಣ ಕುದಿ ಬರಿಸಬೇಕು.
ನಂತರ ಈ ಮಿಶ್ರಣಕ್ಕೆ ಹುರಿದ ಪೈನಾಪಲ್ ಹಾಕಿ ಒಂದು ಕುದಿಬರಿಸಬೇಕು. ಇದಾದ ನಂತರ ಹುರಿದ ಗೋಡಂಬಿಯನ್ನು ಹಾಕಿದರೆ ಪೈನಾಪಲ್ ಪಾಯಸ ತಯಾರಾಗುತ್ತದೆ.