Sunday, June 8, 2025

ಕರ್ನಾಟಕ ಸರ್ಕಾರದ ಈ ವೆಬ್​ಸೈಟ್ ನಲ್ಲಿ​ ಕೊವಿಡ್​ ಪರೀಕ್ಷಾ ವರದಿ ಪಡೆಯಿರಿ

ದೆಹಲಿ: ಭಾರತದಲ್ಲಿ ಕೊರೊನಾ ಮೂರನೇ ಅಲೆಯ ತೀವ್ರತೆ ಹೆಚ್ಚಾಗುತ್ತಿರುವುದರಿಂದ ಲಸಿಕೆ ವಿತರಣೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ಇದೀಗ ಕರ್ನಾಟಕ ಸರ್ಕಾರವು ಕೊವಿಡ್​ ಪರೀಕ್ಷಾ ವರದಿಯನ್ನು ನೋಡಲು ಮತ್ತು ವರದಿಯನ್ನು ಮುದ್ರಿಸಲು ಅಧಿಕೃತವಾಗಿ ವೆಬ್​ಸೈಟ್​ ಬಿಡುಗಡೆ ಮಾಡಿದೆ. ಕೊವಿಡ್​ ಪರೀಕ್ಷಾ ವರದಿಯನ್ನು ಸರ್ಕಾರ ಬಿಡುಗಡೆ ಮಾಡಿದ ಯುಆರ್​ಎಲ್​ ಬಳಸಿ ಮನೆಯಲ್ಲಿಯೇ ಕುಳಿತು ನೋಡಬಹುದು. ಇದರಲ್ಲಿ​ ಪರೀಕ್ಷಾ ವರದಿಯನ್ನು ಡೌನ್​ಲೋಡ್​ ಮಾಡವ ಅವಕಾಶ ಇದೆ.

http://covid.karnataka.gov.in/service1 ಈ ಯುಆರ್​ಎಲ್​ ಬಳಸಿಕೊಂಡು ಕೋವಿಡ್ ಪರೀಕ್ಷಾ ವರದಿಯನ್ನು ನೋಡಬಹುದು ಹಾಗೂ ಡೌನ್​ಲೋಡ್ ಕೂಡ ಮಾಡಬಹುದು. ಈ ವೆಬ್​ಸೈಟ್ ಕರ್ನಾಟಕ ರಾಜ್ಯ ಕೊವಿಡ್ ವಾರ್ ರೂಮ್ ಹೆಸರಿನಲ್ಲಿ​ ಇದೆ. ಈ ವೆಬ್​ಸೈಟ್ ನಲ್ಲಿ ಮೊಬೈಲ್​ ನಂಬರ್, 13 ಡಿಜಿಟ್​ನ ಎಸ್​ಆರ್​ಎಫ್​ ಐಡಿ ಹಾಕಿದರೆ ಪರೀಕ್ಷಿಸಿದ ಲ್ಯಾಬ್ ಫಲಿತಾಂಶವನ್ನು ಐಸಿಎಂಆರ್​ ಪೋರ್ಟಲ್‌ಗೆ ಅಪ್‌ಲೋಡ್ ಮಾಡಿದ ನಂತರ ಕೊವಿಡ್​ ಪರೀಕ್ಷಾ ವರದಿಯು ಲಭ್ಯವಾಗುತ್ತದೆ.

ಕೊವಿಡ್​ ವಾರಿಯರ್ಸ್, ಹೆಲ್ತ್ ವರ್ಕರ್ಸ್​ಗೆ, 60 ವರ್ಷದ ಮೇಲ್ಪಟ್ಟವರಿಗೆ ಜನವರಿ 10 ರಿಂದ ಬೂಸ್ಟರ್​ ಡೋಸ್​ ನೀಡಲಾಗುತ್ತಿದೆ. ಎರಡನೇ ಡೋಸ್ ಪಡೆದ 9 ತಿಂಗಳ ನಂತರ ಬೂಸ್ಟರ್ ಡೋಸ್ ಪಡೆಯಲು ಅರ್ಹರಾಗಿದ್ದಾರೆ. ಹೆಚ್ಚಿನ ಮಾಹಿತಿಯನ್ನು https://selfregistration.cowin.gov.in/ ಈ ವೆಬ್​ಸೈಟ್​ ಪಡೆಯಬಹುದಾಗಿದೆ. ಈ ಯುಆರ್​ಎಲ್​ಗೆ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಬೂಸ್ಟರ್ ಲಸಿಕೆ ಪಡೆಯಲು ಎಷ್ಟು ದಿನಗಳು ಉಳಿದಿವೆ ಎಂಬುದನ್ನು ತಿಳಿಯಬಹುದಾಗಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles