ಉಡುಪಿ: ಜಿಲ್ಲೆಯ ಹೆಬ್ರಿ ತಾಲೂಕಿನ ವರಂಗ ವಾಸಿ ವನಿತಾ ಅವರಿಗೆ ಬೆಳಿಗ್ಗೆ ಸುಮಾರು 8.40 ರ ವೇಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು. ನಂತರ ಅವರನ್ನು ಕಾರ್ಕಳ ಸಾರ್ವಜನಿಕ ಆಸ್ಪತ್ರೆಗೆ ಕಾರ್ಕಳ 108 ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ ವನಿತಾ ಅವರು ಬೆಳಿಗ್ಗೆ 9.15 ಕ್ಕೆ ವರಂಗ ಇಂದ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯ ಜೋಡುರಸ್ತೆ ಬಳಿ ಆಂಬುಲೆನ್ಸ್ ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ವನಿತಾ ಅವರಿಗೆ ಆಂಬುಲೆನ್ಸ್ ನ ಸಿಬ್ಬಂದಿ ಇ ಎಮ್ ಟಿ ರಾಧಾಮಣಿ ಜಿಕೆ ಮತ್ತು ಪಿ ಎಲ್ ಟಿ ಪುಂಡಲಿಕ ಅವರು ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ನಂತರ ಕಾರ್ಕಳ ಸಾರ್ವಜನಿಕ ಆಸ್ಪತ್ರೆಗೆ ತಾಯಿ ಮತ್ತು ಮಗುವನ್ನು ದಾಖಲಿಸಲಾಯಿತು. ವೈದ್ಯರು ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.