ಸಾಮಾಜಿಕ ಜಾಲತಾಣವನ್ನು ಕೆಲವರು ಮನರಂಜನೆಗಾಗಿ ಮಾತ್ರ ಬಳಸಿದರೆ ಇನ್ನು ಕೆಲವರು ತಮ್ಮಲ್ಲಿರುವ ಪ್ರತಿಭೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತುತ ಪಡಿಸುತ್ತಾರೆ. ಲಿಬಿಯಾ ದೇಶದ ಯುವಕನೊಬ್ಬ ಏಕಕಾಲಕ್ಕೆ 6 ಭಾವಚಿತ್ರಗಳನ್ನು ಬಿಡಿಸುವಾ ವಿಡಿಯೋವನ್ನು ಹಂಚಿಕೊಂಡಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲಿಬಿಯಾ ದೇಶದ ಅಡೆಮೋ ಎಂಬ ಯುವಕ ಈ ಅಧ್ಬುತ ಸಾಧನೆ ಮಾಡಿದ್ದು, ಈತ ಲಿಬಿಯಾದಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾರೆ. ಈತನ ಪ್ರತಿಭೆಗೆ ಜಗತ್ತಿನಾದ್ಯಂತ ಈತನಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಅಡೆಮೋ ತನ್ನ ಎರಡು ಕಾಲು ಹಾಗೂ ಎರಡು ಕೈಗಳನ್ನು ಬಳಸಿ 6 ಭಾವಚಿತ್ರಗಳನ್ನು ಬಿಡಿಸಿದ್ದಾನೆ. ಹಾಗೂ “ಸತತ 8 ದಿನಗಳ ಪ್ರಯತ್ನದ ನಂತರ ಈ ಚಿತ್ರವನ್ನು ಬಿಡಿಸಿದ್ದೇನೆ. ಎಲ್ಲರೂ ಎಂಜಾಯ್ ಮಾಡುತ್ತೀರಿ ಎಂದು ಭಾವಿಸುತ್ತೇನೆ” ಎಂದು ಬರೆದು ಚಿತ್ರ ಬಿಡಿಸಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಈ ಹಿಂದೆ ಅಡೆಮೋ ಅವರು ನಾಲ್ಕು ಚಿತ್ರಗಳನ್ನು ಬಿಡಿಸುವ ವಿಡಿಯೋವನ್ನು ಹಂಚಿಕೊಂಡಿದ್ದರು. 2018 ರಲ್ಲಿ ಅಡೆಮೋ ಅವರು ಈ ವಿಭಿನ್ನ ಕಲೆಯ ಅಭ್ಯಾಸ ಆರಂಭಿಸಿದ್ದರು. ತನ್ನ ಸತತ ಪ್ರಯತ್ನದ ಬಳಿಕ ಅಂತಾರಾಷ್ಟ್ರೀಯ ಕಲಾವಿದರಾಗಿದ್ದಾರೆ.