ಕುಂಬಳಕಾಯಿಯ ಹಲ್ವ, ಸಾಂಬಾರ್ ಹೀಗೆಲ್ಲಾ ಮಾಡುತ್ತೇವೆ. ಕುಂಬಳಕಾಯಿಯನ್ನು ಬಳಸಿ ರೊಟ್ಟಿ [ತಾಲಿಪಿಟ್ಟು] ಮಾಡಬಹುವ ವಿಧಾನವನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಿ.
ಸಿಹಿ ಕುಂಬಳಕಾಯಿ ತಾಲಿಪಿಟ್ಟು ಮಾಡಲು ಬೇಕಾಗುವ ಸಾಮಗ್ರಿಗಳು:
- ತುರಿದ ಒಂದು ತುಂಡು ಸಿಹಿ ಕುಂಬಳಕಾಯಿ
- ತುರಿದ ತೆಂಗಿನಕಾಯಿ ಅರ್ಧ ಹೊಳು
- ಅಕ್ಕಿ ಹಿಟ್ಟು 5-6 ಕಪ್
- ಬೆಲ್ಲ ರುಚಿಗೆ
- ಉಪ್ಪು ರುಚಿಗೆ ತಕ್ಕಷ್ಟು
ತಾಲಿಪಿಟ್ಟು ಮಾಡುವ ವಿಧಾನ:
ಮೊದಲಿಗೆ ಒಂದು ಪಾತ್ರೆಗೆ ತುರಿದ ಒಂದು ತುಂಡು ಸಿಹಿ ಕುಂಬಳಕಾಯಿ, ತುರಿದ ತೆಂಗಿನಕಾಯಿ ಅರ್ಧ ಹೊಳು, ಅಕ್ಕಿ ಹಿಟ್ಟು 5-6 ಕಪ್, ಸ್ವಲ್ಪ ಬೆಲ್ಲ ರುಚಿಗೆ, ಉಪ್ಪು ರುಚಿಗೆ ತಕ್ಕಷ್ಟು ಹಾಕಿ ನೀರು ಹಾಕಿ ಅಕ್ಕಿ ರೊಟ್ಟಿಯ ಹದಕ್ಕೆ ಕಲಸಿಕೊಳ್ಳಬೇಕು.
ನಂತರ ಬಾಳೆಎಲೆಗೆ ಎಣ್ಣೆ ಸವರಿ ಅಕ್ಕಿ ರೊಟ್ಟಿಯಂತೆ ತಟ್ಟಿ. ಅದನ್ನು ಬೇಯಿಸಿದರೆ ಸಿಹಿ ಕುಂಬಳಕಾಯಿ ಸಿಹಿ ತಾಲಿಪಿಟ್ಟು ತಯಾರಾಗುತ್ತದೆ.