Saturday, June 7, 2025

ಒಎಲ್ ಎಕ್ಸ್ ನಲ್ಲಿ ಕಿವಿಯೋಲೆ ಮಾರಲು ಹೋದ ಯುವತಿಗೆ 93 ಸಾವಿರ ವಂಚನೆ

ಉಡುಪಿ: ಒಎಲ್ ಎಕ್ಸ್ ನಲ್ಲಿ ಕಿವಿಯೋಲೆ ಮಾರಲು ಹೋಗಿ ಯುವತಿಯೊಬ್ಬರು 93 ಸಾವಿರ ಹಣ ಕಳೆದುಕೊಂಡಿದ್ದಾರೆ. ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಒಎಲ್ ಎಕ್ಸ್ ನಲ್ಲಿ ಕಿವಿಯೋಲೆ ಮಾರುವ ಜಾಹಿರಾತನ್ನು ಮಣಿಪಾಲದ, ಸೊನಿಯಾ ಹಾಸ್ಟೆಲ್ ನ ನಿವಾಸಿಯಾದ ಖುಷಿ ನೀಡಿದ್ದರು. ಕಿವಿಯೋಲೆ ಖರೀದಿಸುವುದಾಗಿ ಅಪರಿಚಿತ ವ್ಯಕ್ತಿಯೊಬ್ಬ ಇವರಿಗೆ ಕರೆ ಮಾಡಿದ್ದಾನೆ. ಮೊದಲಿಗೆ ಪೇಟಿ ಎಂ ಮೂಲಕ ಯುವತಿಗೆ 100 ರೂ. ಪಾವತಿಸಿದ್ದಾನೆ. ನಂತರ 19,018 ರೂ. ಯುವತಿಯ ಖಾತೆಯಿಂದ ಕಡಿತಗೊಂಡಿದೆ. ಯುವತಿ ಈ ಕುರಿತು ಆ ವ್ಯಕ್ತಿಗೆ ಕರೆ ಮಾಡಿ ವಿಚಾರಿಸಿದಾಗ ಹಣವನ್ನು ಮರುಪಾವತಿ ಮಾಡುವುದಾಗಿಯೂ, ಹಣ ಪಾವತಿಸಲು ಬೇರೆ ಯಾವುದಾದರೂ ಖಾತೆಯ ಮಾಹಿತಿಯನ್ನು ಒದಗಿಸುವಂತೆಯೂ ಹೇಳಿ ನಂಬಿಸಿದ್ದಾನೆ.

ಯುವತಿ ಆತನ ಮಾತನ್ನು ನಂಬಿ ತನ್ನ ಸ್ನೇಹಿತೆ ಸಾಯಿ ಚಂದನ್ ಎಂಬುವವರ ಮೊಬೈಲ್ ನಂಬರ್ ನೀಡಿದ್ದಾರೆ. ನಂತರ ಆ ಮೊಬೈಲ್ ನಂಬರ್ ಗೆ ಬಂದ ಓಟಿಪಿ ವಿವರವನ್ನು ಕೇಳಿದ್ದಾನೆ. ನಂತರ ಸ್ನೇಹಿತೆಯ ಖಾತೆಯಿಂದಲೂ 74,800 ರೂ. ಹಂತ ಹಂತವಾಗಿ ಕಡಿತಗೊಂಡಿದೆ. ಕಿವಿಯೋಲೆ ಮಾರಲು ಹೋಗಿ ಒಟ್ಟು 93,818 ರೂ ಕಳೆದುಕೊಂಡಿದ್ದಾರೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles