ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವವರು ಈ ವೈಟ್ ಲಾಸ್ ಡ್ರಿಂಕ್ಸ್ ಕುಡಿಯುವ ಮೂಲಕ 15 ದಿನಗಳಲ್ಲಿ 5 – 10 ಕೆಜಿಗಳಷ್ಟು ತೂಕ ಇಳಿಸಿಕೊಳ್ಳಬಹುದಾಗಿದೆ.
ಈ ವೈಟ್ ಲಾಸ್ ಡ್ರಿಂಕ್ಸ್ ಮಾಡಲು ಬೇಕಾಗುವ ಸಾಮಾಗ್ರಿಗಳು:
- ಪೈನಾಪಲ್ 1 ಕಪ್
- 2 ಸಣ್ಣ ಸೌತೇಕಾಯಿ
- ಶುಂಠಿ 2 ಇಂಚಿನಷ್ಟು
- ನಿಂಬೆ ಹಣ್ಣಿನ ರಸ
ಮಾಡುವ ವಿಧಾನ:
ಮೊದಲು ಒಂದು ಮಿಕ್ಸಿ ಜಾರ್ ಗೆ ಸಣ್ಣಗೆ ಹೆಚ್ಚಿದ ಪೈನಾಪಲ್, 2 ಸಣ್ಣ ಸೌತೇಕಾಯಿ ಹಾಗೂ ಶುಂಠಿ 2 ಇಂಚಿನಷ್ಟು ಹಾಕಿ ಮುಕ್ಕಾಲು ಲೀಟರ್ ನಷ್ಟು ನೀರು ಹಾಕಿ ರುಬ್ಬಿಕೊಳ್ಳಿ.
ನಂತರ ಇದನ್ನು ಒಂದು ಲೋಟಕ್ಕೆ ಹಾಕಿಕೊಂಡು 1 ಚಮಚ ನಿಂಬೆ ಹಣ್ಣಿನ ರಸ ಹಾಕಿ ಕಲಸಿದರೆ ವೈಟ್ ಲಾಸ್ ಡ್ರಿಂಕ್ಸ್ ತಯಾರಾಗುತ್ತದೆ.
ಯಾರು ತೂಕ ಕಡಿಮೆ ಮಾಡಿಕೊಳ್ಳಲು ಬಯಸುತ್ತಾರೋ ಅಂತವರು ಬೆಳಿಗ್ಗೆ ಖಾಲಿ ಹೊಟ್ಟೆಗೆ ಅರ್ಧ ಲೀಟರ್ ನಷ್ಟು ಹಾಗೂ ರಾತ್ರಿ ಮಲಗುವ ಮುನ್ನ ಅರ್ಧ ಲೀಟರ್ ನಷ್ಟು ಕುಡಿಯಬೇಕು. ಈ ರೀತಿ ನಿಯಮಿತವಾಗಿ 15 ದಿನಗಳು ಕುಡಿದರೆ ನಿಮ್ಮ ತೂಕ 5-10 ಕೆಜಿಗಳಷ್ಟು ಕಡಿಮೆ ಆಗುತ್ತದೆ. ಹೀಗೆ ಈ ಡ್ರಿಂಕ್ಸ್ ನ್ನು ದಿನಕ್ಕೆ ಒಂದು ಲೀಟರ್ ನಷ್ಟು ತಪ್ಪದೇ ಕುಡಿಯಬೇಕು.
ಈ ಡ್ರಿಂಕ್ಸ್ ನಲ್ಲಿ ವಿಟಮಿನ್ ಸಿ ಇರುವುದರಿಂದ ಶುಗರ್, ಬಿಪಿ, ಥೈರಾಯ್ಡ್ ಹೀಗೇ ಯಾವ ಸಮಸ್ಯೆ ಇರುವವರು ಬೇಕಾದರೂ ಕುಡಿಯಬಹುದು. ಇದನ್ನು ಕುಡಿಯುವುದರಿಂದ ತೂಕ ಕಡಿಮೆ ಆಗುವುದರ ಜೊತೆಗೆ ಹೊಟ್ಟೆ ಉಬ್ಬರಿಸುವುದು, ಹಸಿವಿನ ಸಮಸ್ಯೆ, ಜೀರ್ಣಕ್ರಿಯೆ ಹಾಗೂ ಚರ್ಮಕ್ಕೂ ಕೂಡ ಸಹಕಾರಿಯಾಗಿದೆ.