Saturday, June 7, 2025

ವೀಕ್ಷಕರಿಗೆ ಬಂಪರ್ ಆಫರ್ ನೀಡಿದ ಅಮೇಜಾನ್​ ಪ್ರೈಮ್​

ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಸುಮಾರು 3 ತಿಂಗಳುಗಳಾಗುತ್ತಾ ಬಂದಿದೆ. ಆದರೆ ಅವರನ್ನು ಒಂದಲ್ಲ ಒಂದು ರೀತಿಯಲ್ಲಿ ನೆನಪು ಮಾಡಿಕೊಳ್ಳುವ ಕೆಲಸ ಹಾಗೂ ಅವರಿಗೆ ಗೌರವ ಸೂಚಿಸುವಂತಹ ಕೆಲಸಗಳನ್ನು ಮಾಡಲಾಗುತ್ತಿದೆ. ಇದೀಗ ಅಮೇಜಾನ್​ ಪ್ರೈಮ್ ಪುನೀತ್​ ನಿರ್ಮಾಣದ ಹಾಗೂ ಅವರು ನಟಿಸಿದ ಐದು ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸಲು ಅವಕಾಶ ನೀಡುವ ಮೂಲಕ ಗೌರವ ಸೂಚಿಸುತ್ತಿದೆ.

ಇತ್ತೀಚಿನ ದಿನಗಳಲ್ಲಿ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಂತರ ಓಟಿಟಿಯಲ್ಲಿಯೂ ಸಹ ಬಿಡುಗಡೆಯಾಗುತ್ತಿದೆ. ಒಟಿಟಿ ಪ್ಲಾಟ್​ಫಾರ್ಮ್​ಗಳು ತನ್ನತ್ತ ಗಮನ ಸೆಳೆಯಲು ಹಲವಾರು ತಂತ್ರಗಳನ್ನು ಉಪಯೋಗಿಸುತ್ತಲಿವೆ. ಇದೀಗ ಅಮೇಜಾನ್​ ಪ್ರೈಮ್ ವೀಕ್ಷಕರಿಗೆ ಬಂಪರ್​ ಆಫರ್ ನೀಡುವ ಮೂಲಕ ವೀಕ್ಷಕರನ್ನು ತನ್ನತ್ತ ಸೆಳೆದಿದೆ.

ಪುನೀತ್​ ನಿರ್ಮಾಣದ ‘ಕವಲುದಾರಿ’, ‘ಮಾಯಾ ಭಜಾರ್​’, ‘ಲಾ’, ‘ಫ್ರೆಂಚ್​ ಬಿರಿಯಾನಿ’ ಹಾಗೂ ಪುನೀತ್ ನಟನೆಯ ಯುವರತ್ನ ಈ ಐದು ಸಿನಿಮಾಗಳನ್ನು ಅಮೇಜಾನ್​ ಪ್ರೈಮ್​ ನಲ್ಲಿ ಫೆ.1 ರಿಂದ ಫೆ. 28 ರ ವರೆಗೆ ಉಚಿತವಾಗಿ ವೀಕ್ಷಿಸಬಹುದಾದ ಅವಕಾಶ ನೀಡಿದೆ. ಇವರ ನಿರ್ಮಾಣದ ​‘ಒನ್​ ಕಟ್​ ಟೂ ಕಟ್’, ‘ಫ್ಯಾಮಿಲಿ ಪ್ಯಾಕ್’, ‘ಮ್ಯಾನ್​ ಆಫ್​ ದಿ ಮ್ಯಾಚ್​’ ಸಿನಿಮಾಗಳು ಅಮೇಜಾನ್ ಪ್ರೈಮ್​ನಲ್ಲಿ ಬಿಡುಗಡೆ ಆಗುತ್ತಲಿದ್ದು, ಇದರ ಜೊತೆಗೆ ಈ ಐದು ಸಿನಿಮಾಗಳು ಉಚಿತ ವೀಕ್ಷಣೆಗೆ ಸಿಗುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles