Saturday, June 7, 2025

ಉಣ್ಣೆಯಿಂದಷ್ಟೇ ಅಲ್ಲ ನೂಡಲ್ಸ್​​ನಿಂದಲೂ ಸ್ಕಾರ್ಫ್ ತಯಾರಿಸಬಹುದು..!

ಸಾಮಾನ್ಯವಾಗಿ ಸ್ಕಾರ್ಫ್ ಅನ್ನು ಉಣ್ಣೆಯಿಂದ ತಯಾರಿಸುತ್ತೇವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಮಹಿಳೆಯೊಬ್ಬರು ಸ್ಕಾರ್ಫ್ ಅನ್ನು ನೂಡಲ್ಸ್​​ನಿಂದ ತಯಾರಿಸಿದ್ದಾರೆ. ಈ ಮೂಲಕ ಉಣ್ಣೆಯಿಂದಷ್ಟೇ ಅಲ್ಲ ನೂಡಲ್ಸ್​​ನಿಂದಲೂ ಸ್ಕಾರ್ಫ್ ತಯಾರಿಸಬಹುದೆಂದು ಈ ಮಹಿಳೆ ತೋರಿಸಿಕೊಟ್ಟಿದ್ದಾರೆ.

ಸಿಂಗಾಪುರ್ ನ ಸಿಂಥಿಯಾ ಸುವಿಟೊ ಎಂಬ ಮಹಿಳೆ ನೂಡಲ್ಸ್​​ನಿಂದ ಸ್ಕಾರ್ಫ್ ತಯಾರಿಸುವ ವಿಡಿಯೋವನ್ನು ಟಿಕ್‌ಟಾಕ್ ನಲ್ಲಿ ಹಂಚಿಕೊಂಡಿದ್ದಾರೆ. ಜನವರಿ 16 ರಂದು ಟ್ವಿಟರ್‌ನಲ್ಲಿ ಅಪ್‌ಲೋಡ್ ಆದ ಈ ವಿಡಿಯೋವನ್ನು 7 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದು,  81,000 ರೀಟ್ವೀಟ್‌ಗಳನ್ನು ಪಡೆದಿದೆ.

ನೂಡಲ್ಸ್​​ನಲ್ಲಿ ಸ್ಕಾರ್ಫ್ ಹೆಣೆಯುವ ಕಲೆಯು 2014 ರಲ್ಲಿ ಪ್ರಾರಂಭವಾಗಿತ್ತು. ಆದರೆ ಇದೀಗ ಸಿಂಥಿಯಾ ಸುವಿಟೊ ಅವರ ಈ ವಿಡಿಯೋ ಮೂಲಕ ಈ ಕಲೆಯು ಪ್ರಸಿದ್ಧವಾಗಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles