ನವದೆಹಲಿ: ಕೊರೋನಾ ಲಸಿಕೆ ಪಡೆಯಲು ಕೋ-ವಿನ್ ವೆಬ್ಸೈಟ್ನಲ್ಲಿ ಒಂದು ಮೊಬೈಲ್ ಸಂಖ್ಯೆ ಬಳಸಿ 6 ಜನರು ತಮ್ಮ ಹೆಸರನ್ನು ನೋಂದಾಯಿಸಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆಯು ಶುಕ್ರವಾರ ತಿಳಿಸಿದೆ.
ಈ ಮೊದಲು ಒಂದು ಮೊಬೈಲ್ ಸಂಖ್ಯೆ ಬಳಸಿ ಕೇವಲ ನಾಲ್ಕು ಜನರು ಹೆಸರನ್ನು ನೋಂದಾಯಿಸಬಹುದಾಗಿತ್ತು. ಆದರೆ ಈಗ ಪರಿಷ್ಕೃತ ಅಧಿಸೂಚನೆಯ ಅನುಸಾರ 6 ಜನರು ಕೇವಲ ಒಂದು ಮೊಬೈಲ್ ಸಂಖ್ಯೆ ಬಳಸಿ ನೋಂದಾಯಿಸಿಕೊಳ್ಳಬಹುದು. ಬಳಕೆದಾರರು ಕೊರೋನಾ ಲಸಿಕೆ ಸ್ಥಿತಿಯನ್ನು ಬದಲಾಯಿಸುವ ಅವಕಾಶ ನೀಡಲಾಗಿದೆ. ಇದು ಡೇಟಾ ಎಂಟ್ರಿ ಹಾಗೂ ಕೋವಿಡ್ ಲಸಿಕೆ ಪ್ರಮಾಣಪತ್ರ ದೋಷವನ್ನು ಸರಿಪಡಿಸಲು ಸಹಾಯವಾಗಲಿದೆ ಎಂದು ತಿಳಿಸಿದೆ.