ವಿಶ್ವ ಆರೋಗ್ಯ ಸಂಸ್ಥೆಯು ಕೊರೋನಾ ರೂಪಾಂತರಿ ಒಮಿಕ್ರಾನ್ ವಿಶ್ವದ 171 ದೇಶಗಳಿಗೆ ಹಬ್ಬಿದೆ ಎಂದು ಮಾಹಿತಿ ನೀಡಿದೆ. ಒಮಿಕ್ರಾನ್ ಡೆಲ್ಟಾಗಿಂತ ವೇಗವಾಗಿ ಹಬ್ಬುತ್ತಾ ಜಾಗಾತಿಕ ಮಟ್ಟದಲ್ಲಿ ಆವರಿಸಲಿದೆ ಎಂದು ತಿಳಿಸಿದೆ.
ಒಮಿಕ್ರಾನ್ ಡೆಲ್ಟಾಗಿಂತಾ ವೇಗವಾಗಿ ಹಬ್ಬುತ್ತದೆ. ಹಾಗೂ ಒಮಿಕ್ರಾನ್ ಸೋಂಕಿತರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಜನವರಿ 20 ರ ವರೆಗೆ 171 ದೇಶಗಳಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲೂ ಏರಿಕೆ ಕಂಡಿದೆ ಎಂದು ತಿಳಿಸಿದೆ.
ಪ್ರಸ್ತುತ ಭಾರತ, ಯುಕೆ, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಬಿಎ-2 ವಂಶಾವಳಿಯ ಒಮಿಕ್ರಾನ್ ಪತ್ತೆಯಾಗಿದೆ. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆಯು ಅಧ್ಯಯನ ನಡೆಸುತ್ತಿದೆ. ಈ ಸೋಂಕು ಮಾನವನ ಶ್ವಾಸಕೋಶದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.