Sunday, June 8, 2025

ಮೈ ಕೊರೆಯುವ ಚಳಿಯಲ್ಲಿ ಯೋಧನ ಸಾಹಸ..!

ಗಡಿ ಭದ್ರತಾ ಪಡೆ (ಬಿಎಸ್ ಎಫ್) ಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಯೋಧರೊಬ್ಬರು ವ್ಯಾಯಾಮ ಮಾಡುವ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದರಲ್ಲೇನಿದೆ ವಿಶೇಷ ಯೋಧರು ನಿತ್ಯವೂ ವ್ಯಾಯಾಮ ಮಾಡುತ್ತಾರೆ ಎಂದೆನಿಸಬಹುದು. ಆದರೆ ಈ ಯೋಧ ಹಿಮದಲ್ಲಿ 40 ಸೆಕೆಂಡ್ ಗಳಲ್ಲಿ 47 ಪುಶ್ ಅಪ್ಸ್ ಅನ್ನು ಮಾಡಿದ್ದಾರೆ.

ಬರಿ ನೆಲದ ಮೇಲೆ 40 ಸೆಕೆಂಡ್ ಗಳಲ್ಲಿ 47 ಪುಶ್ ಅಪ್ಸ್ ಮಾಡುವುದು ಕಷ್ಟಸಾಧ್ಯ. ಹೀಗಿರುವಾಗ ಕೊರೆಯುವ ಚಳಿಯಲ್ಲಿ ಹಿಮದ ಮೇಲೆ 40 ಸೆಕೆಂಡ್ ನಲ್ಲಿ 47 ಪುಶ್ ಅಪ್ಸ್ ಮಾಡಿರುವುದು ಅಚ್ಚರಿಯೇ ಸರಿ. ಇವರ ಈ ಸಾಧನೆಗೆ ಸಾಮಾಜಿಕ ಜಾಲತಾಣದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಗಡಿ ಭದ್ರತಾ ಪಡೆಯು ಮತ್ತೊಂದು ವೀಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ ಯೋಧರೊಬ್ಬರು ಕೈ ಗೆ ಗ್ಲೌಸ್ ಕೂಡ ಹಾಕಿಕೊಳ್ಳದೆ ಒಂದೇ ಕೈಯಲ್ಲಿ ಪುಶ್ ಅಪ್ಸ್ ಮಾಡಿದ್ದಾರೆ. ಈ ಎರಡು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles