ಮಂಗಳೂರು: ಜಿಲ್ಲೆಯ ರೆಮೋನಾ ಪರೇರಾ ಅವರು ಇಂದು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ ಪ್ರಶಸ್ತಿಯನ್ನು ಸ್ವೀಕರಿಸಿದರು.
ರೆಮೋನಾ ಪರೇರಾ ಅವರು ಭರತನಾಟ್ಯ ಕಲಾವಿದೆ. ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ ಪ್ರಶಸ್ತಿಯನ್ನು ಪಡೆದ ರಾಜ್ಯದ ಏಕೈಕ ಬಾಲಕಿ ಇವರಾಗಿದ್ದಾರೆ. ಇವರಿಗೆ ನವದೆಹಲಿಯಿಂದ ಡಿಜಿಟಲ್ ಮಾಧ್ಯಮದ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಶಸ್ತಿ ನೀಡಿದರು. ಪ್ರಶಸ್ತಿ ನೀಡಿದ ಬಳಿಕ ಪ್ರಧಾನ ಮಂತ್ರಿ ಮೋದಿ ಅವರು ರೆಮೋನಾ ಪರೇರಾ ಅವರೊಂದಿಗೆ ಮಾತನಾಡಿದರು.