Sunday, June 29, 2025

ಕೈಕಾಲಿಗೆ ಕೋಳ ಹಾಕಿಕೊಂಡು ಸಮುದ್ರದಲ್ಲಿ ಐದುವರೆ ಗಂಟೆ ಈಜಿ ದಾಖಲೆ

ಉಡುಪಿ: ಸಮುದ್ರದಲ್ಲಿ ಈಜುವುದೇ ಒಂದು ಸಾಹಸ. ಅಂತಹದರಲ್ಲಿ 66 ವರ್ಷದ ಗಂಗಾಧರ್ ಜಿ.ಕಡೇಕಾರ್ ಅವರು ಮೂರುವರೆ ಕಿ.ಮೀ ಕೈಕಾಲಿಗೆ ಕೋಳ ಹಾಕಿ ಈಜುವ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಮಾಡಿದ್ದಾರೆ.

ಸೋಮವಾರ ಬೆಳಿಗ್ಗೆ 7.50 ಕ್ಕೆ ಕಿದಿಯೂರು ಪಡುಕೆರೆ ಬಳಿಯ ಶ್ರೀದೇವಿ ಭಜನಾ ಮಂದಿರದ ಹತ್ತಿರವಿರುವ ಸಮುದ್ರದಲ್ಲಿ ಗಂಗಾಧರ್ ಅವರು ಕೈ ಗೆ ಕೋಳ ಕಾಲಿಗೆ ಸರಪಳಿ ಹಾಕಿಕೊಂಡು 5 ಗಂಟೆ 35 ನಿಮಿಷಗಳ ಕಾಲ ಈಜಿ ದಾಖಲೆ ಮಾಡಿದ್ದಾರೆ.

ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್‌ ಸಂಸ್ಥೆಯ ಮನೀಷ್‌ ವೈಷ್ಣಯ್‌ ಅವರು ತಾತ್ಕಾಲಿಕವಾಗಿ ಸ್ಥಳದಲ್ಲಿಯೇ ವಿಶ್ವದಾಖಲೆಯ ಪ್ರಮಾಣಪತ್ರವನ್ನು ಗಂಗಾಧರ್ ಅವರಿಗೆ ನೀಡಿದರು. ಹಾಗೂ ದಾಖಲೆಗಳನ್ನು ಪರೀಕ್ಷಿಸಿ ಸದ್ಯದಲ್ಲೇ ಅಧಿಕೃತ ಪ್ರಮಾಣಪತ್ರ ನೀಡುತ್ತೇವೆ ಎಂದು ಹೇಳಿದರು.

ಗಂಗಾಧರ್ ಅವರು ಕಳೆದ ವರ್ಷ ಜನವರಿ 24 ರಂದು ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಹಾಕಿಕೊಂಡು 1.4 ಕೀಮಿ ಬ್ರೆಸ್ಟ್ ಸ್ಟ್ರೋಕ್ ಮಾದರಿಯಲ್ಲಿ ಈಜಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಮಾಡಿದ್ದರು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles