Sunday, June 8, 2025

ಮತ್ತೆ ಕೆಂಗಣ್ಣಿಗೆ ಗುರಿಯಾದ ಅಮೇಜಾನ್

ಅಮೇಜಾನ್ 73 ನೇ ಗಣರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರಧ್ವಜದ ಮುದ್ರೆ, ಚಿತ್ರವುಳ್ಳ ವಸ್ತುಗಳನ್ನು ಅಮೇಜಾನ್​ ಮಾರಾಟ ಮಾಡುತ್ತಿದೆ. ಈ ಮೂಲಕ ಅಮೇಜಾನ್ ಮತ್ತೆ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಜನರು ಭಾರತದ ತ್ರಿವರ್ಣ ಧ್ವಜಕ್ಕೆ ಅಮೇಜಾನ್ ಅವಮಾನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಮೇಜಾನ್​ ಬಹಿಷ್ಕರಿಸಿ, ಅಮೇಜಾನ್​ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುತ್ತಿದೆ ಹೀಗೆ ಇತ್ಯಾದಿ ಹ್ಯಾಷ್​​ಟ್ಯಾಗ್​ನಡಿ ಜನರು ಪೋಸ್ಟ್ ಹಾಕುತ್ತಿದ್ದಾರೆ.

ಅಮೇಜಾನ್ ನಲ್ಲಿ ಧ್ವಜದ ಚಿತ್ರ ಮುದ್ರಿಸಲಾಗಿರುವ ಟಿ-ಶರ್ಟ್​ಗಳು, ಮಾಸ್ಕ್​ಗಳು, ಕೀ ಚೈನ್​​ಗಳು, ಚಾಕಲೇಟ್ ಕವರ್​​ಗಳು ​, ಸೆರಾಮಿಕ್ ಮಗ್​​ಗಳು, ಮಕ್ಕಳ ಬಟ್ಟೆಗಳು ಮಾರಟಕ್ಕೆ ಸಿಗುತ್ತಿದೆ. ಆದರೆ ಧ್ವಜ ಸಂಹಿತೆಯ ಪ್ರಕಾರ ಯಾವುದೇ ಉಡುಪಿನಲ್ಲಿ ರಾಷ್ಟ್ರಧ್ವಜ ಮುದ್ರಿಸುವಂತಿಲ್ಲ. ಹಾಗೂ ಕುಶನ್​ಗಳು, ಕರವಸ್ತ್ರಗಳು, ನ್ಯಾಪ್​ಕಿನ್​ ಅಥವಾ ಪೆಟ್ಟಿಗೆಗಳ ಮೇಲೆ ಮುದ್ರಣ ಅಥವಾ ಕಸೂತಿ ಮಾಡುವಂತಿಲ್ಲ. ಅಮೇಜಾನ್​ ತನ್ನ ಮಾರಾಟ ಪ್ರಮಾಣ ಹೆಚ್ಚಿಸಿಕೊಳ್ಳಲು ರಾಷ್ಟ್ರ ಧ್ವಜ ಸಂಹಿತೆಯನ್ನು ಹಾಗೂ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುತ್ತಿದೆ ಆದ್ದರಿಂದ ಅಮೇಜಾನ್​ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದ ಅನೇಕರು ಆಗ್ರಹಿಸಿದ್ದಾರೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles