Saturday, June 7, 2025

ಹಸಿರು ಟೊಮೆಟೊ ಸೇವಿಸಿ ಕಾಯಿಲೆಗಳಿಂದ ದೂರವಿರಿ

ಸಾಮಾನ್ಯವಾಗಿ ನಾವು ಹಸಿರು ಟೊಮೆಟೊವನ್ನು ಬಳಸುವುದು ಕಡಿಮೆ. ಬದಲಾಗಿ ಆಹಾರ ಪದಾರ್ಥಗಳಲ್ಲಿ ಕೆಂಪು ಟೊಮೆಟೊವನ್ನು ಹೆಚ್ಚಾಗಿ ಬಳಸುತ್ತೇವೆ. ಹಸಿರು ಟೊಮೆಟೊದಲ್ಲಿ ವಿಟಮಿನ್-ಸಿ, ವಿಟಮಿನ್-ಎ, ಫೈಬರ್, ಫೋಲೇಟ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಹೀಗೆ ಮುಂತಾದ ಪೋಷಕಾಂಶಗಳಿರುವುದರಿಂದ ಅನೇಕ ಕಾಯಿಲೆಗಳಿಗೆ ಹಸಿರು ಟೊಮೆಟೊ ರಾಮಬಾಣವಾಗಿದೆ.

  • ಹಸಿರು ಟೊಮೆಟೊದಲ್ಲಿನ ಬೀಟಾ-ಕ್ಯಾರೋಟಿನ್ ಅಂಶವು ಕಣ್ಣಿನ ದೃಷ್ಟಿಯನ್ನು ಹಾಗೂ ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಕಣ್ಣಿನ ದೃಷ್ಟಿಯ ತೊಂದರೆ ಹೊಂದಿರುವವರು ಹಸಿರು ಟೊಮೆಟೊ ಸೇವಿಸುವುದರಿಂದ ಕಣ್ಣಿನ ಆರೋಗ್ಯ ಹಾಗೂ ದೃಷ್ಟಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
  • ಹಸಿರು ಟೊಮೆಟೊದಲ್ಲಿ ವಿಟಮಿನ್ ಸಿ ಅಂಶವು ಹೇರಳವಾಗಿರುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ದೇಹದಲ್ಲಿ ಕಡಿಮೆ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವವರು ನಿಯಮಿತವಾಗಿ ಹಸಿರು ಟೊಮೆಟೊವನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
  • ಹಸಿರು ಟೊಮೆಟೊದಲ್ಲಿ ಸೋಡಿಯಂನ ಅಂಶ ಕಡಿಮೆ ಹಾಗೂ ಪೊಟ್ಯಾಸಿಯಮ್ ಅಂಶ ಅಧಿಕವಾಗಿರುವುದರಿಂದ ದೇಹದಲ್ಲಿನ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಲು ಸಹಾಯ ಮಾಡುತ್ತದೆ. ರಕ್ತದೊತ್ತಡ ರೋಗಿಗಳಿಗೆ ಹಸಿರು ಟೊಮೆಟೊವು ತುಂಬಾ ಪ್ರಯೋಜನಕಾರಿಯಾಗಿದೆ.
  • ಹಸಿರು ಟೊಮೆಟೊದಲ್ಲಿ ವಿಟಮಿನ್ ಸಿ ಅಂಶ ಹಾಗೂ ಆಂಟಿಆಕ್ಸಿಡೆಂಟ್ ಗಳು ಚರ್ಮವನ್ನು ಆಯೋಗ್ಯವಾರಿಸಲು ಸಹಾಯ ಮಾಡುತ್ತದೆ.
  • ಹಸಿರು ಟೊಮೆಟೊದಲ್ಲಿ ವಿಟಮಿನ್-ಕೆ ಅಂಶವು ಅಧಿಕವಾಗಿರುವುದರಿಂದ ರಕ್ತ ಹೆಪ್ಪುಗಟ್ಟುವಿಕೆಯನ್ನು ಕಡಿಮೆ ಮಾಡುತ್ತದೆ. ಹಾಗೂ ಮೂಳೆಗಳನ್ನು ಬಲಗೊಳಿಸುತ್ತದೆ.
Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles