ಎಲ್ಲಾ ಭಾಷೆಗಳಲ್ಲೂ ಸಿನಿಮಾ ಬಿಡುಗಡೆಯ ದಿನಾಂಕಕ್ಕಾಗಿ ಪೈಪೋಟಿ ಪ್ರಾರಂಭವಾಗಿದೆ. ಕೊರೋನಾ ಮೂರನೆ ಅಲೆಯಿಂದಾಗಿ ಬಿಡುಗಡೆ ದಿನಾಂಕವನ್ನು ನಿಗದಿ ಪಡಿಸಿದ್ದ ಹಲವಾರು ಸಿನಿಮಾಗಳು ತನ್ನ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿದೆ. ಈ ನಡುವೆ ಪ್ರಜ್ವಲ್ ದೇವರಾಜ್ ನಟನೆಯ ‘ವೀರಂ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
‘ವೀರಂ’ ಸಿನಿಮಾ ನಿರ್ಮಾಪಕರು ಮೇ 6 ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಸಿನಿಮಾವನ್ನು ಕುಮಾರ್ ರಾಜ್ ನಿರ್ದೇಶನ ಮಾಡಿದ್ದು, ಶಶಿಧರ್ ಕೆ.ಎಂ. ಬಂಡವಾಳ ಹೂಡಿದ್ದಾರೆ. ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದು, ಪ್ರಜ್ವಲ್ ಗೆ ಜೋಡಿಯಾಗಿ ರಚಿತಾ ರಾಮ್ ತೆರೆ ಹಂಚಿಕೊಂಡಿದ್ದಾರೆ.
ಈಗಾಗಲೇ ‘ವೀರಂ’ ಸಿನಿಮಾದ ಟೀಸರ್ ಮತ್ತು ಪೋಸ್ಟರ್ ಗಳ ಮೂಲಕ ಪೇಕ್ಷಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದಲ್ಲಿ ಪ್ರಜ್ವಲ್ ವಿಷ್ಣುವರ್ಧನ್ ಅಭಿಮಾನಿಯಾಗಿದ್ದು, ಇವರ ಕೈ ಮೇಲಿನ ಟ್ಯಾಟೂ ಸಖತ್ ಹೈಲೈಟ್ ಆಗಿದೆ. ಸಿನಿಮಾದಲ್ಲಿ ಶ್ರುತಿ, ಶಿಷ್ಯ ದೀಪಕ್, ಶ್ರೀನಗರ ಕಿಟ್ಟಿ, ಅಚ್ಯುತ್ ಕುಮಾರ್ ನ ಬಹುತಾರಾಂಗಣವಿದೆ.