ನವದೆಹಲಿ:ಕೇಂದ್ರ ಸರ್ಕಾರ ಡ್ರೋನ್ ಸರ್ಟಿಫಿಕೇಟ್ ಯೋಜನೆಗೆ ಜನವರಿ 26 ರ ಬುಧವಾರ ಅಧಿಸೂಚನೆ ಹೊರಡಿಸಿದೆ. ಇದರಿಂದ ಡ್ರೋನ್ಗಳಿಗೆ ಸರ್ಟಿಫಿಕೇಟ್ನ ಮಾನ್ಯತೆ ನೀಡುವ ಪ್ರಕ್ರಿಯೆ ತ್ವರಿತ, ಪಾರದರ್ಶಕ ಮತ್ತು ಸರಳವಾಗಲಿದೆ.
ಉದಾರೀಕೃತ ಡ್ರೋನ್ ನಿಯಮಾವಳಿ-೨೦೨೧ನ್ನು ನಾಗರಿಕ ವಿಮಾನಯಾನ ಸಚಿವಾಲಯ ಬಿಡುಗಡೆಗೊಳಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ನಾಗರಿಕಾ ವಿಮಾನಯಾನ ಸಚಿವಾಲಯ ಡ್ರೋನ್ ವಲಯದ ಅಭಿವೃದ್ಧಿಗೋಸ್ಕರ ಸರ್ಕಾರ ಈಗಾಗಲೇ ಏರ್ಸ್ಪೇಸ್ ಮ್ಯಾಪ್ ಅನ್ನು ಅಧಿಸೂಚನೆಗೊಳಿಸಿದೆ. ಪಿಎಲ್ಐ ಯೋಜನೆ ಮತ್ತು ಸಿಂಗಲ್ ವಿಂಡೊ ಡಿಜಿಟಲ್ ಸ್ಕೈ ಪ್ಲಾಟ್ಫಾರ್ಮ್ ಸಿದ್ಧಪಡಿಸಲಾಗಿದೆ. ಇದು ಭಾರತದಲ್ಲಿ ಡ್ರೋನ್ ತಯಾರಿಕೆಯ ಉದ್ಯಮವನ್ನು ಅಭಿವೃದ್ಧಿಪಡಿಸಲಿದೆ. ಇನ್ನು, 2030ರ ವೇಳೆಗೆ ಭಾರತವನ್ನು ವಿಶ್ವದ ಡ್ರೋನ್ ಕೇಂದ್ರವನ್ನಾಗಿ ಮಾಡುವುದು ಸರ್ಕಾರದ ಗುರಿಯಾಗಿದೆ ಎಂದು ತಿಳಿಸಿದ್ದಾರೆ.