ಬೆಂಗಳೂರು: ದಿನೇ ದಿನೇ ರಾಜಧಾನಿಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಕಮೀಷನರ್ ಡಾ. ರವಿಕಾಂತೇಗೌಡ ನೇತೃತ್ವದ ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಬಳಕೆ ಸೇರಿ ಕೆಲವು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಲು ಚಿಂತನೆ ನಡೆಸಿದ್ದಾರೆ.
ಹಾಫ್ ಹೆಲ್ಮೆಟ್ ನಿಷೇಧ ಮಾಡುವಂತೆ ಸರ್ಕಾರಕ್ಕೆ ನಿಮ್ಹಾನ್ಸ್ ಶಿಫಾರಸ್ಸು ಮಾಡಿದೆ. ನಿಮ್ಹಾನ್ಸ್ ಮತ್ತು ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಜಂಟಿಯಾಗಿ 1 ಲಕ್ಷ ಬೈಕ್ ಸವಾರರ ಸಮೀಕ್ಷೆ ಮಾಡಿದ್ದಾರೆ. ಈ ಸಮೀಕ್ಷೆಯಿಂದ ಕಳೆದ ಒಂದು ವಾರದಲ್ಲಿ 15 ಪ್ರಮುಖ ಏರಿಯಾಗಳಲ್ಲಿ ಹಾಫ್ ಹೆಲ್ಮೆಟ್ ಅನ್ನು ಶೇಕಡ 26 ರಷ್ಟು ಜನರು ಬಳಕೆ ಮಾಡುತ್ತಿದ್ದಾರೆ. ಅಪಘಾತದಿಂದ ತಲೆಗೆ ಪೆಟ್ಟಾಗುತ್ತಿರುವವರ ಸಂಖ್ಯೆ ಹೆಚ್ಚಳಕ್ಕೆ ಈ ಹಾಫ್ ಹೆಲ್ಮೆಟ್ ಪ್ರಮುಖ ಕಾರಣ. ಬೈಕ್ ನ ಹಿಂಬದಿ ಕುಳಿತುಕೊಳ್ಳುವವರಲ್ಲಿ ಶೇಕಡ 70 ರಷ್ಟು ಜನರು ಮಾತ್ರ ಹೆಲ್ಮೆಟ್ ಧರಿಸುತ್ತಾರೆ ಎಂದು ಸಮೀಕ್ಷೆ ಇಂದ ತಿಳಿದುಬಂದಿದೆ.