Sunday, June 8, 2025

ಏರ್ ಇಂಡಿಯಾದ ಬದಲಾವಣೆಗಳ ಪರ್ವ ಆರಂಭ

ನವದೆಹಲಿ: 69 ವರ್ಷಗಳ ಕಾಲ ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿದ್ದ ಏರ್ ಇಂಡಿಯಾವನ್ನು ಟಾಟಾ ಸಮೂಹ ಸಂಸ್ಥೆ ಸರ್ಕಾರದಿಂದ ನಿನ್ನೆ ಅಧಿಕೃತವಾಗಿ ಮರಳಿ ಪಡೆದಿದೆ. ಏರ್ ಇಂಡಿಯಾವನ್ನು ಮರಳಿ ಪಡೆದ ನಂತರ ಆಡಳಿತ ಮಂಡಳಿಯು ಹಲವು ಬದಲಾವಣೆಗಳನ್ನು ಮಾಡಿದೆ.

ವಿಮಾನಗಳು ಸಮಯಕ್ಕೆ ಸರಿಯಾಗಿ ಟೇಕಾಫ್-ಲ್ಯಾಂಡಿಗ್ ಆಗಬೇಕು. ಪ್ರಯಾಣಕ್ಕೆ 10 ನಿಮಿಷ ಮೊದಲೇ ವಿಮಾನದ ಬಾಗಿಲು ಮುಚ್ಚಲು ಪ್ರಯತ್ನಿಸಬೇಕು. ಮುಂದಿನ ವಾರದೊಳಗೆ ಸಿಬ್ಬಂದಿಗಳ ವರ್ಚಸ್ಸು, ಮನೋವೃತ್ತಿ, ಗ್ರಹಿಕೆ ಬದಲಾಗಬೇಕು ಹೀಗೆ ಹಲವು ಶಿಸ್ತಿನ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಮುಂಬೈ – ನವದೆಹಲಿ (2 ವಿಮಾನ), ಮುಂಬೈ – ಬೆಂಗಳೂರು, ಮುಂಬೈ – ಅಬುಧಾಬಿ ವಿಮಾನಗಳಲ್ಲಿ ಊಟದ ವ್ಯವಸ್ಥೆ ಬದಲಾವಣೆ ಮಾಡಲಾಗಿದ್ದು, ಸಿಬ್ಬಂದಿಗಳು ಉತ್ತಮವಾಗಿ ಕಾಣುವಂತೆ ಡ್ರೆಸ್ ಮಾಡಿಕೊಳ್ಳಬೇಕು ಹಾಗೂ ನಿಯಮ ಪಾಲನೆ ಮಾಡಬೇಕು ಎಂಬ ಆದೇಶ ಹೊರಡಿಸಲಾಗಿದೆ.

2021 ರ ಅಕ್ಟೋಬರ್ ನಲ್ಲಿ ಸರ್ಕಾರ ಏರ್ ಇಂಡಿಯಾವನ್ನು ಹರಾಜಿಗೆ ಇರಿಸಿದಾಗ ಟಾಟಾ ಸಮೂಹ ಸಂಸ್ಥೆಯ ಅಂಗಸಂಸ್ಥೆಯಾದ ತಾಲೇಸ್​ ಪ್ರೈವೇಟ್ ಲಿಮಿಟೆಡ್​ 18 ಸಾವಿರ ಕೋಟಿ ರೂಪಾಯಿಗೆ ಏರ್ ಇಂಡಿಯಾವನ್ನು ಖರೀದಿ ಮಾಡಿತ್ತು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles