ನವದೆಹಲಿ: ಭಾರತ್ ಬಯೋಟೆಕ್ ಲಸಿಕಾ ತಯಾರಿಕಾ ಕಂಪನೆಯು ಕೋವಾಕ್ಸಿನ್ ನ ಎರಡೂ ಡೋಸ್ ಗಳನ್ನು ಪಡೆದ ಜನರಿಗೆ ಇಂಟ್ರಾನಾಸಲ್ ಬೂಸ್ಟರ್ ಡೋಸ್ನ 3 ನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಮಾಡಲು ಅನುಮೋದನೆ ಪಡೆದಿದೆ. ಇಂದು ಭಾರತದ ಡ್ರಗ್ ಕಂಟ್ರೋಲರ್ ಜನರಲ್ 3 ನೇ ಹಂತದ ಪ್ರಯೋಗಗಳಿಗೆ ಚಾಲನೆ ನೀಡಿದ್ದು, ದೇಶದ 9 ಸ್ಥಳಗಳಲ್ಲಿ ಪ್ರಯೋಗ ಮಾಡಲಾಗುತ್ತದೆ.
ಇಂಟ್ರಾನಾಸಲ್ ಲಸಿಕೆಯು ಕೊರೋನಾ ಹರಡುವಿಕೆಯನ್ನು ಸಮರ್ಪಕವಾಗಿ ತಡೆಯುತ್ತದೆ. ಮೂಗಿನ ಮೂಲಕ ಹಾಕುವ ಲಸಿಕೆ BBV154, ಈ ಲಸಿಕೆಯು ಮೂಗಿನ ಮೂಲಕ ಪ್ರತಿರಕ್ಷಣಾ ಪ್ರತಿಕ್ರಿಯೆಗಳು ಹೆಚ್ಚಾಗುವಂತೆ ಉತ್ತೇಜನ ನೀಡುತ್ತದೆ. 900 ವಿಷಯಗಳ ಮೇಲೆ ಪ್ರಯೋಗಗಳನ್ನು ಮಾಡಿ ಭಾರತ್ ಬಯೋಟೆಕ್ ಸಂಸ್ಥೆಯು ಇಂಟ್ರಾನಾಸಲ್ ಲಸಿಕೆಯನ್ನು ತಯಾರಿಸಿದೆ.
ಭಾರತದಲ್ಲಿ ಭಾರತ್ ಬಯೋಟೆಕ್ ಬೂಸ್ಟರ್ ಡೋಸ್ ನ 3 ನೇ ಹಂತದ ಪ್ರಯೋಗಕ್ಕಾಗಿ ಅರ್ಜಿ ಹಾಕಿದ ಎರಡನೇ ಕಂಪನಿಯಾಗಿದೆ. ಇಂಟ್ರಾನಾಸಲ್ ಲಸಿಕೆಯು ಒಮಿಕ್ರಾನ್ ಹಾಗೂ ಕೋವಿಡ್-19 ಹೊಸ ರೂಪಾಂತರಗಳ ಹರಡುವಿಕೆಯನ್ನು ಸಮರ್ಪಕವಾಗಿ ತಡೆಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ವರದಿ ತಿಳಿಸಿದೆ.