ನಾಸಾವು ಹಿಂದಿಗಿಂತ ಹೆಚ್ಚು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ತಯಾರಿ ನಡೆಸುತ್ತಿದೆ. ಈ ಗಗನಯಾತ್ರಿಗಳಿಗೆ ಬಾಹ್ಯಾಕಾಶದಲ್ಲಿ ಆಹಾರ ಕೊರತೆ ಉಂಟಾಗಬಾರದೆಂಬ ಕಾರಣದಿಂದ ಗಗನಯಾತ್ರಿಗಳಿಗೆ ಆಹಾರ ಒದಗಿಸುವ ನವೀನ ಮತ್ತು ಸುಸ್ಥಿರ ಆಹಾರ ಉತ್ಪಾದನಾ ಯೋಜನೆಯನ್ನು ಪ್ರಸ್ತುತಪಡಿಸುವವರಿಗೆ ನಾಸಾವು $1 ಮಿಲಿಯನ್ ವರೆಗೆ ಬಹುಮಾನವನ್ನು ನೀಡುತ್ತದೆ.
ನಾಸಾವು ಈ ಕುರಿತು ಟ್ವೀಟ್ ಮಾಡಿದ್ದು, ದೀರ್ಘ ಅವಧಿಯ ಬಾಹ್ಯಾಕಾಶ ಯೋಜನೆಗಳನ್ನು ಪ್ರದರ್ಶನ ಮಾಡುವ ತಂಡಕ್ಕೆ $1 ಮಿಲಿಯನ್ ಅನ್ನು ಬಹುಮಾನವಾಗಿ ನೀಡುತ್ತೇವೆ. ಇದು ಭೂಮಿ ಮೇಲಿರುವ ಜನರಿಗೆ ಅತ್ಯುತ್ತಮ ಅವಕಾಶ. ನೀವು ಸಿದ್ಧರಿದ್ದರೆ ಈಗಲೇ ಸೈನ್ ಅಪ್ ಮಾಡಿ ಎಂದು ಆಹ್ವಾನಿಸಲಾಗಿದೆ.