ನವದೆಹಲಿ: ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 39.54 ಲಕ್ಷ ಕೋಟಿಯ ಬಜೆಟ್ ಮಂಡಿಸಿದ್ದಾರೆ. ಈ ಬಾರಿ ಬಜೆಟ್ ನಲ್ಲಿ ಕೆಲವು ವಸ್ತುಗಳು ದುಬಾರಿ ಹಾಗೂ ಇನ್ನು ಕೆಲವು ವಸ್ತುಗಳ ಬೆಲೆ ಇಳಿಕೆಯಾಗಿದೆ.
ಈ ಬಾರಿಯ ಬಜೆಟ್ ನ ಅನುಸಾರ ಪೆಟ್ರೋಲ್ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಅನ್ ಬ್ಲೆಂಡೆಡ್ ಇಂಧನಕ್ಕೆ ಹೆಚ್ಚುವರಿ 2 ರುಪಾಯಿ ತೆರಿಗೆ ಹಾಕಲಾಗಿದೆ.
ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್, ಚಿನ್ನ, ಬಟ್ಟೆ, ಮೊಬೈಲ್ ಚಾರ್ಜರ್, ಚಪ್ಪಲಿ ವಿದೇಶಿ ಉತ್ಪನ್ನಗಳು, ವಜ್ರಾಭರಣ, ಕೃಷಿ ಉಪಕರಣಗಳ ಬೆಲೆಯನ್ನು ಇಳಿಕೆ ಮಾಡಲಾಗಿದೆ. ಹಾಗೇ ಕಚ್ಚಾ ವಜ್ರದ ಮೇಲಿನ ಸುಂಕವನ್ನು ಶೇಕಡ. 5 ರಷ್ಟು ಹಾಗೂ ಔಷಧಿಗಳ ಮೇಲಿನ ಸುಂಕವನ್ನು ಕಡಿಮೆ ಮಾಡಲಾಗಿದೆ.