ಉಡುಪಿ: ರಸ್ತೆ ದಾಟುತ್ತಿದ್ದ ವೇಳೆ ಪಾದಾಚಾರಿಗಳಿಗೆ ಕಾರು ಡಿಕ್ಕಿಯಾಗಿ ಗರ್ಭಿಣಿ ಸಹಿತ ಮೂವರು ರಸ್ತೆಗೆ ಬಿದ್ದು, ಗರ್ಭಿಣಿ ಮಹಿಳೆಯ ತಲೆಗೆ ಗಂಭೀರ ಗಾಯವಾಗಿರುವ ಘಟನೆ ಫೆಬ್ರವರಿ 3ರಂದು ಉಡುಪಿಯ ಕಡಿಯಾಳಿ ಬಳಿ ನಡೆದಿದೆ.
ಓರ್ವ ಗರ್ಭಿಣಿ ಸಹಿತ ಮೂವರು ರಸ್ತೆಯ ಎಡಭಾಗದಿಂದ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಕಡೆಗೆ ರಸ್ತೆ ದಾಟುತ್ತಿದ್ದ ವೇಳೆ ಮಣಿಪಾಲದಿಂದ ಉಡುಪಿ ಕಡೆಗೆ ವೇಗವಾಗಿ ಬರುತ್ತಿದ್ದ ಇನ್ನೋವಾ ಕಾರು ಆ ಮೂವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ದೃಶ್ಯಾವಳಿ ಪಕ್ಕದ ಶೋರೂಮ್ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.