Sunday, June 8, 2025

ಈ ಮನೆಮದ್ದು ಪಾಲಿಸಿದರೆ ಕ್ಯಾನ್ಸರ್ ನಿಯಂತ್ರಣ ಖಂಡಿತ

ಕ್ಯಾನ್ಸರ್ ಪೀಡಿತರಿಗೆ ಆಗುವ ಅನ್ಯಾಯವನ್ನು ತಡೆಯಲು ಹಾಗೂ ಕ್ಯಾನ್ಸರ್ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯು ಫೆಬ್ರವರಿ 4 ನ್ನು ವಿಶ್ವ ಕ್ಯಾನ್ಸರ್ ದಿನವನ್ನಾಗಿ ಆಚರಿಸಲು ನಿರ್ಧರಿಸಿತ್ತು. ಹೆಚ್ಚಿನ ಜನರಲ್ಲಿ ಕ್ಯಾನ್ಸರ್ ಒಂದು ಮಾರಣಾಂತಿಕ ಖಾಯಿಲೆ ಎಂಬ ತಪ್ಪು ಕಲ್ಪನೆಯಿದೆ. ಕ್ಯಾನ್ಸರ್ ಬಂದವರೆಲ್ಲರೂ ಸಾಯುವುದಿಲ್ಲ. ಪ್ರಾಥಮಿಕ ಹಂತದ ಕ್ಯಾನ್ಸರ್ ಇರುವವರಿಗೆ, ಹಾಗೇ ಸರಿಯಾದ ಚಿಕಿತ್ಸೆಯನ್ನು ಪಡೆಯುವವರು ಕ್ಯಾನ್ಸರ್ ನಿಂದ ಗುಣಮುಖರಾಗಬಹುದು.

ಕ್ಯಾನ್ಸರ್ ತಡೆಗಟ್ಟಬಹುದಾದ ವಿಧಾನ:

  • ಪ್ರತಿದಿನ ನಾವು ದೇಹಕ್ಕೆ ಅಗತ್ಯವಿರುವಷ್ಟು ನಿದ್ರೆಯನ್ನು ಮಾಡಬೇಕು. ಈ ನಿದ್ರೆ ಅತಿಯಾಗಲೂ ಬಾರದು, ತುಂಬಾ ಕಡಿಮೆಯಾಗಲೂ ಬಾರದು. ಸರಿಯಾಗಿ ನಿದ್ರೆ ಮಾಡಿದಲ್ಲಿ ಕ್ಯಾನ್ಸರ್ ಅನ್ನು ನಿಯಂತ್ರಿಸಬಹುದೆಂದು ಅಧ್ಯಯನ ತಿಳಿಸಿದೆ.
  • ಕ್ಯಾನ್ಸರ್ ಗೆ ಬೆಳ್ಳುಳ್ಳಿಯು ಉತ್ತಮ ಮನೆ ಮದ್ದು. ಇದು ಕ್ಯಾನ್ಸರ್ ನಿರೋಧಕ ಶಕ್ತಿಯನ್ನು ದೇಹದಲ್ಲಿ ಹೆಚ್ಚಿಸುವುದಷ್ಟೇ ಅಲ್ಲದೇ ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ.
  • ಡಾರ್ಕ್ ಚಾಕಲೇಟ್ ಅನ್ನು ತಿನ್ನುವುದರಿಂದ ಕ್ಯಾನ್ಸರ್ ಅನ್ನು ನಿಯಂತ್ರಣ ಮಾಡಬಹುದು.
  • ಕೋಸುಗಡ್ಡೆಯನ್ನು ಸೇವಿಸುವುದರಿಂದ ದೇಹದಲ್ಲಿ ಕ್ಯಾನ್ಸರ್ ಹೆಚ್ಚಾಗುವುದನ್ನು ತಡೆಯುತ್ತದೆ. ಇದು ಕ್ಯಾನ್ಸರ್ ಮೇಲೆ ಹೆಚ್ಚು ಪರಿಣಾಮವನ್ನುಂಟು ಮಾಡುತ್ತದೆ.
  • ಪ್ರತಿದಿನ ಸೂರ್ಯನ ಶಾಖವನ್ನು ಪಡೆಯುವುದರಿಂದ ಕ್ಯಾನ್ಸರ್ ಅನ್ನು ನಿಯಂತ್ರಣದಲ್ಲಿಡಬಹುದು. ಕ್ಯಾನ್ಸರ್ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ ಆ ಕಿರಣಗಳು ಕ್ಯಾನ್ಸರ್ ನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.
  • ಪ್ರತಿದಿನವೂ ನಮ್ಮ ದೇಹಕ್ಕೆ ಅಗತ್ಯವಿರುವಷ್ಟು ನೀರನ್ನು ಸೇವಿಸಲೇಬೇಕು. ನೀರನ್ನು ಹೆಚ್ಚಾಗಿ ಸೇವಿಸುವುದರಿಂದ ದೇಹದಲ್ಲಿ ಹೆಚ್ಚಿನ ಶಕ್ತಿ ಉತ್ಪಾದನೆಯಾಗುವುದರ ಜೊತೆಗೆ ಕ್ಯಾನ್ಸರ್ ಅನ್ನು ಕಡಿಮೆ ಮಾಡುತ್ತದೆ.
  • ಕ್ಯಾನ್ಸರ್ ಅನ್ನು ತಡೆಗಟ್ಟಲು ಪ್ರತಿನಿತ್ಯ ಬೆಳಿಗ್ಗೆ ಅಥವಾ ಸಂಜೆ 30 ನಿಮಿಷ ವ್ಯಾಯಾಮ ಮಾಡುವುದು ಉತ್ತಮ.
  • ತಾಜಾ ಹಣ್ಣುಗಳು (ಸೇಬು, ಕಿತ್ತಳೆ, ಲಕ್ಷ್ಮಣಫಲ, ಕ್ರ್ಯಾನ್ ಬೆರೀಸ್ ಹಣ್ಣುಗಳು ಉತ್ತಮ), ಕೆಂಪು ಅಕ್ಕಿ, ಜೋಳ, ತರಕಾರಿಗಳು, ಧಾನ್ಯಗಳು ಕ್ಯಾನ್ಸರ್ ವಿರುದ್ಧ ಹೋರಾಡಲು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
  • ಸೋಂಪುಕಾಳು, ಕೇಸರಿ, ಜೀರಿಗೆ, ಚಕ್ಕೆ, ಓರೆಗಾನೊ, ಕೆಂಪುಮೆಣಸು, ಶುಂಠಿ, ಲವಂಗ, ಕಾರ್ವೇ, ತುಳಸಿ, ಮೆಂತ್ಯೆ, ಪುದಿನಾ ಎಲೆಗಳು, ಅವಕಾಡೊ ಇವುಗಳು ಕ್ಯಾನ್ಸರ್ ನಿರೋಧಕ ಆಹಾರ ಪದಾರ್ಥಗಳಾಗಿದ್ದು, ಇವುಗಳನ್ನು ಅಡುಗೆಯಲ್ಲಿ ಬಳಸುವುದು ಉತ್ತಮ.
Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles