Monday, June 9, 2025

ಸ್ವೀಡನ್ ನಲ್ಲಿ ಈ ಕಾರಣಕ್ಕಾಗಿ ಕಾಗೆಗಳಿಗೆ ನೀಡಲಾಗುತ್ತಿದೆ ತರಬೇತಿ

ಸ್ವೀಡನ್: ಇಲ್ಲಿಯ ನಗರಗಳಲ್ಲಿ ದಿನದಿಂದ ದಿನಕ್ಕೆ ಬೀದಿಯಲ್ಲಿ ಬೀಳುವ ಸಿಗರೇಟ್ ಚೂರುಗಳ ಪ್ರಮಾಣ ಹೆಚ್ಚಾಗುತ್ತಿದ್ದು, ಇದರಿಂದ ಮಣ್ಣಿನ ಮಾಲಿನ್ಯವನ್ನು ಉಂಟಾಗುತ್ತಿದೆ. ಈ ಸಮಸ್ಯೆಯನ್ನು ನಿವಾರಣೆ ಮಾಡುವ ಸಲುವಾಗಿ ಸ್ವೀಡನ್ ನ ಸ್ಟಾರ್ಟ್​ ಅಪ್​ ಕಂಪನಿಯೊಂದು ಕಾಗೆಗಳಿಗೆ ಸಿಗರೇಟ್​ ಚೂರುಗಳನ್ನು ಹೆಕ್ಕಿ ತರುವ ತರಬೇತಿಯನ್ನು ನೀಡಲು ಮುಂದಾಗಿದೆ.

ಪ್ರತಿ ಬಾರಿ ಕಾಗೆಗಳು ಸಿಗರೇಟ್ ಚೂರುಗಳನ್ನು ಮಷಿನ್​ನೊಳಗೆ ಹಾಕುವಾಗ ಆಹಾರವನ್ನು ಪಡೆಯುತ್ತದೆ. ಕೋರ್ವಿಡ್​ ಕ್ಲೀನಿಂಗ್​ ಎಂಬ ಸಂಸ್ಥೆ ಈ ಸಾಹಸಕ್ಕೆ ಮುಂದಾಗಿದ್ದು, ಸಿಗರೇಟ್ ಚೂರುಗಳನ್ನು ಸಂಗ್ರಹಿಸಲು ಹಾಗೂ ಪ್ರತೀ ಸಿಗರೇಟ್​ ಬಡ್​ ಪತ್ತೆಗೆ 16 ರೂಪಾಯಿ ಖರ್ಚಾಗುತ್ತದೆ. ಅದೇ ಕಾಗೆಗಳಿಗೆ ತರಬೇತಿ ನೀಡಿ ಈ ಕಾರ್ಯಕ್ಕೆ ಬಳಸಿಕೊಂಡರೆ ಖರ್ಚು ಕಡಿಮೆಯಾಗುತ್ತದೆ ಎನ್ನುವುದು ಸಂಸ್ಥೆಯ ಸ್ಥಾಪಕರಾದ ಗುಂಥರ್​ ಅನ್ಸೇನ್ ಅಭಿಪ್ರಾಯ.

ಕಾಗೆಗಳಿಗೆ ತರಬೇತಿ ನೀಡುವುದು ಸುಲಭದ ಕೆಲಸ. 7 ರಿಂದ 10 ವರ್ಷದ ಮಕ್ಕಳಲ್ಲಿ ಇರುವ ಬುದ್ಧಿವಂತಿಕೆ ಕಾಗೆಗಳಲ್ಲಿ ಕಂಡುಬರುತ್ತದೆ. ಆದ್ದರಿಂದ ನಗರಗಳನ್ನು ಸ್ವಚ್ಛಗೊಳಿಸಲು ಕಾಗೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಗುಂಥರ್​ ಅನ್ಸೇನ್ ತಿಳಿಸಿದ್ದಾರೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles