Sunday, June 8, 2025

ಹಳೇ ಪ್ರೇಮಿ ಮೇಲಿನ ಕೋಪ ತೀರಿಸಿಕೊಳ್ಳಲು ಇಲ್ಲಿದೆ ವ್ಯಾಲಂಟೈನ್ಸ್ ಡೇ ಆಫರ್!

ಬ್ರಿಟನ್: ಪ್ರೇಮಿಗಳ ದಿನ ಸಮೀಪಿಸುತ್ತಿದ್ದು, ಕೆಲವರು ಈ ದಿನವನ್ನು ಸಂಭ್ರಮದಿಂದ ಆಚರಿಸಿದರೆ ಇನ್ನು ಕೆಲವರಿಗೆ ಈ ದಿನವು ಖುಷಿಯನ್ನು ತಂದುಕೊಡುವುದಿಲ್ಲ. ಕಾರಣ ಈ ದಿನ ಅವರಿಗೆ ಹಳೇ ಪ್ರೇಮಿಯ ನೆನಪಾಗಬಹುದು, ಅವರು ಕೈಕೊಟ್ಟು ಹೋಗಿರುವುದರಿಂದ ಈ ದಿನವೆಂದರೆ ಕೆಲವರಿಗೆ ಸಿಟ್ಟು ತರಿಸುತ್ತದೆ. ಬ್ರಿಟನ್​ನ ಹೆಂಸ್ಲೆ ಕನ್ಸರ್ವೇಶನ್ ಸೆಂಟರ್ (ಹೆಚ್​​ಸಿಸಿ) ನೊಂದ ಪ್ರೇಮಿಗಳಿಗಾಗಿ ಬಂಪರ್ ಆಫರ್ ನೀಡಿದೆ.

ಹಳೆ ಪ್ರೇಮಿಗಳ ಮೇಲೆ ಇರುವ ಕೋಪವನ್ನು ತೀರಿಸಿಕೊಳ್ಳಲು ಜಿರಳೆಗಳಿಗೆ ಹಳೇ ಪ್ರೇಮಿಗಳ ಹೆಸರನ್ನಿಟ್ಟು ಕೋಪ ತೀರಿಸಿಕೊಳ್ಳುವ ಆಫರ್ ಅನ್ನು ಈ ಸಂಸ್ಥೆ ನೀಡಿದೆ. ಹೀಗೆ ಜಿರಳೆಗಳಿಗೆ ಮರುನಾಮಕರಣ ಮಾಡಲು 1.50 ಯೂರೋ ಅಥವಾ 150 ರೂಪಾಯಿ ನಿಗದಿ ಪಡಿಸಲಾಗಿದ್ದು, ಈ ಹಣವನ್ನು ಹೆಚ್​​ಸಿಸಿಯ ಅಭಿವೃದ್ಧಿಪರ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತದೆ. ಮರುನಾಮಕರಣಗೊಂಡ ಜಿರಳೆಗಳನ್ನು ‘ರೋಚ್ ಬೋರ್ಡ್​​’ನಲ್ಲಿ ಪ್ರದರ್ಶಿಸಲಾಗುತ್ತದೆ. ಫೆಬ್ರವರಿ 10 ರ ಮಧ್ಯಾಹ್ನ 12 ಗಂಟೆಯ ವರೆಗೆ ಮರುನಾಮಕರಣ ನೋಂದಣಿಗೆ ಅವಕಾಶವಿದೆ.

ಹಳೆ ಪ್ರೇಮಿಗಳ ಹೆಸರನ್ನು ಜಿರಳೆಗಳಿಗೆ ಇಡುವ ಯೋಜನೆಯು “ನಿಮ್ಮಲ್ಲಿನ ಋಣಾತ್ಮಕ ಯೋಚನೆಗಳನ್ನು ದೂರ ಮಾಡಿ ನಿಮ್ಮ ಮುಖದಲ್ಲಿ ನಗು ಮೂಡಿಸಲು ರೂಪಿಸಲಾಗಿದೆ” ಎಂದು ಹೆಚ್​​ಸಿಸಿ ಸಂಸ್ಥೆಯು ತಿಳಿಸಿದೆ. ಜಿರಳೆಗೆ ನಿಮ್ಮ ಹಳೇ ಪ್ರೇಮಿಯ ಹೆಸರಿಟ್ಟು ನಿಮ್ಮ ಕೋಪ ಕಡಿಮೆ ಮಾಡಿಕೊಳ್ಳಬಹುದು, ಹಾಗೇ ನಿಮ್ಮ ಹಳೇ ಪ್ರೇಮಿಗೆ ಗೌರವ ಅಥವಾ ಜಿರಳೆಗೆ ಹಳೇ ಪ್ರೇಮಿ ಹೆಸರಿಟ್ಟು ಕ್ಷುಲ್ಲಕವೆಂದು ಭಾವಿಸಬಹುದು ಎಂದು ಸಂಸ್ಥೆ ತಿಳಿಸಿದೆ.

ಇದೀಗ ಈ ಯೋಜನೆಯು ವಿವಿಧ ರಾಷ್ಟ್ರಗಳಲ್ಲಿ ಜನಪ್ರಿಯವಾಗುತ್ತಿದ್ದು, ಪ್ರೇಮಿಗಳ ದಿನದ ಸಂದರ್ಭದಂದು ಟೆಕ್ಸಾಸ್‌ನಲ್ಲಿರುವ ಸ್ಯಾನ್ ಆಂಟೋನಿಯೊ ಮೃಗಾಲಯ, ನ್ಯೂಯಾರ್ಕ್‌ನ ಬ್ರಾಂಕ್ಸ್ ಮೃಗಾಲಯ, ಚಿಕಾಗೋದ ಬ್ರೂಕ್‌ಫೀಲ್ಡ್ ಮೃಗಾಲಯ, ಯುಕೆಯ ಡೆವೊನ್‌ನ ಡಾರ್ಟ್‌ಮೂರ್ ಮೃಗಾಲಯ ಮತ್ತು ಹಲವು ಮೃಗಾಲಯಗಳು ಹಾಗೂ ಹಲವು ಅಧ್ಯಯನ ಕೇಂದ್ರಗಳು ಈ ಆಫರ್ ನೀಡುತ್ತಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles