ನಿಟ್ಟೆ: ಇಲ್ಲಿಯ ಅಂಬಡೆಕಲ್ಲು ನಿವಾಸಿ ಗಂಗಾ (68) ಅವರು ಏಣಿಯಿಂದ ಜಾರಿಬಿದ್ದು ಮೃತ ಪಟ್ಟಿದ್ದಾರೆ.
ಗಂಗಾ ಅವರು ಮನೆಯಲ್ಲಿ ಅಲ್ಯುಮಿನಿಯಂ ಏಣಿಯನ್ನು ಪೈಂಟ್ ಮಾಡಲು ಹತ್ತುತ್ತಿದ್ದಾಗ ಏಣಿಯಿಂದ ಜಾರಿ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರಿಗೆ ಕಾರ್ಕಳದ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಅವರನ್ನು ಕಾರ್ಕಳದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಾಕಾರಿಯಾಗದೆ ಮೃತ ಪಟ್ಟಿದ್ದಾರೆ.