Sunday, June 8, 2025

ಆರ್ಡರ್ ಮಾಡಿದ್ದ ಆ್ಯಪಲ್‌ ಐಫೋನ್ ಬದಲಿಗೆ ಡೆಲಿವರಿ ಆಯ್ತು ಸೋಪ್​ನ  ಬಾಟಲಿ

ಉತ್ತರ ಲಂಡನ್: ಇತ್ತೀಚಿನ ವರ್ಷಗಳಲ್ಲಿ ಆಫ್‌ಲೈನಿನಲ್ಲಿ ವಸ್ತುಗಳನ್ನು ಖರೀದಿಸುವವರಿಗಿಂತ ಹೆಚ್ಚಾಗಿ ಆನ್ ಲೈನಿನಲ್ಲಿ ಖರೀದಿಸುವವರೇ ಹೆಚ್ಚು. ಕೆಲವೊಮ್ಮೆ ಹೀಗೆ ಆನ್ ಲೈನಿನಲ್ಲಿ ಖರೀದಿ ಮಾಡಿದಾಗ ಆರ್ಡರ್‌ ಮಾಡಿದ ವಸ್ತುವಿನ ಬದಲಿಗೆ ಬೇರೆ ವಸ್ತುಗಳು ಬಂದ ಉದಾಹರಣೆಗಳೂ ಇವೆ. ಇದೇ ರೀತಿ ಖೌಲಾ ಲಫೈಲಿ ಎಂಬ ಮಹಿಳೆ ಆನ್ ಲೈನಿನಲ್ಲಿ ಐಫೋನ್ 13 ಪ್ರೊ ಮ್ಯಾಕ್ಸ್ ಆರ್ಡರ್​​ ಮಾಡಿದ್ದು ಇದಕ್ಕೆ ಬದಲಾಗಿ ಸೋಪ್​ನ ಬಾಟಲಿ ಡೆಲವರಿ ಆಗಿದೆ.

ಬ್ರಿಟನ್‌ ಮೂಲದ ಖೌಲಾ ಲಫೈಲಿ ಎಂಬ ಮಹಿಳೆ ಉತ್ತರ ಲಂಡನ್ ನಲ್ಲಿರುವ ತನ್ನ ಮನೆಯಲ್ಲಿ ಸ್ಕೈ ಮೊಬೈಲ್‌ನಿಂದ ಜನವರಿ 24 ರಂದು 1,500 ಡಾಲರ್​​ ನೀಡಿ ಐಫೋನ್ 13 ಪ್ರೊ ಮ್ಯಾಕ್ಸ್ ಆರ್ಡರ್​​ ಮಾಡಿದ್ದರು. ಮುಂಗಡವಾಗಿ £ 150 ಹಣವನ್ನು ಪಾವರಿಸಿದ್ದರು. ಹಾಗೇ 36 ತಿಂಗಳ ಒಪ್ಪಂದಕ್ಕೆ ಕೂಡ ಸಹಿ ಮಾಡಿದ್ದರು. ಆದರೆ ಡೆಲಿವರಿ ಆಗಬೇಕಿದ್ದ ದಿನದಂದು ಆರ್ಡರ್ ಡೆಲಿವರಿ ಆಗದ ಕಾರಣ ಆರ್ಡರ್ ಮಾಡಿದ ಸೈಟ್​ಗೆ ಕರೆ ಮಾಡಿ ವಿಚಾರಿಸಿದ್ದಾರೆ.

ಕೊನೆಗೆ ಆರ್ಡರ್ ಡೆಲಿವರಿ ಆಯಿತು. ಆದರೆ ಈ ಡೆಲಿವರಿ ಪೆಟ್ಟಿಗೆ ಅಲ್ಲಿ ಐಫೋನ್ 13 ಪ್ರೊ ಮ್ಯಾಕ್ಸ್ ಬದಲಿಗೆ ಬ್ಲೂ ಹ್ಯಾಂಡ್ ಸೋಪ್​ನ  ಬಾಟಲಿ ಡೆಲಿವರಿ ಆಗಿದೆ. ತಕ್ಷಣ ಸ್ಕೈ ಮೊಬೈಲ್‌ಗೆ ಕರೆ ಮಾಡಿ ವಿಚಾರಿಸಿ ದೂರು ನೀಡಿದ್ದಾರೆ. ಮೋಸ ಹೋಗಿ ಒಂದು ವಾರವಾದರೂ ಇವರು ಆರ್ಡರ್ ಮಾಡಿದ ಐಫೋನ್ ಬಂದಿಲ್ಲ. ಆಸೆಯಿಂದ ಆರ್ಡರ್ ಮಾಡಿದ ಐಫೋನ್ ಬದಲಿಗೆ ಸೋಪಿನ ಬಾಟಲಿ ಬಂದಿರುವುದರಿಂದ ಮಹಿಳೆ ಮನನೊಂದಿದ್ದಾರೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles