ಮಂಗಳೂರು: ವ್ಯಕ್ತಿಯೋರ್ವ ಎಟಿಎಂನಿಂದ ಹಣ ದೋಚಲು ವಿಫಲ ಯತ್ನ ನಡೆಸಿ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ತೊಕ್ಕಟ್ಟುವಿನಲ್ಲಿರುವ ಬ್ಯಾಂಕ್ ಆಫ್ ಬರೋಡಾ ಎಟಿಎಂ ಬಳಿ ಮಂಗಳವಾರ ತಡರಾತ್ರಿ ನಡೆದಿದೆ.
ಬಂಧಿತನನ್ನು ಕೊಪ್ಪಳ ಜಿಲ್ಲೆಯ ಬಾಚನಹಳ್ಳಿ ನಿವಾಸಿ ಬೀರಪ್ಪ ಎಂದು ಗುರುತಿಸಲಾಗಿದೆ. ಮಂಗಳವಾರ ತಡರಾತ್ರಿ 2ಗಂಟೆಗೆ ಎಟಿಎಂ ಒಳಗೆ ನುಗ್ಗಿದ ಈತ ಎಟಿಎಂ ಯಂತ್ರವನ್ನು ಜಖಂಗೊಳಿಸಿ ಹಣ ದೋಚಲು ಯತ್ನಿಸಿದ್ದಾನೆ. ಆದರೆ ಹಣ ಹೊರಬಂದಿಲ್ಲ, ಈ ದೃಶ್ಯಾವಳಿ ಎಟಿಎಂನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎಟಿಎಂ ಕಣ್ಗಾವಲು ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.