ಅಮೃತಸರ: ಪಂಜಾಬ್ನ ಅಮೃತಸರದ ಪಂಜ್ಗ್ರಾಹಿಯನ್ ಗಡಿಯ ಹೊರ ಭಾಗದಲ್ಲಿ ಡ್ರೋನ್ ಮುಖಾಂತರ ಸ್ಫೋಟಕಗಳನ್ನು ಎಸೆಯಲಾಗಿದ್ದು, ಭಯೋತ್ಪಾದಕರ ಸ್ಫೋಟ ಪ್ರಯತ್ನವನ್ನು ಭಾರತೀಯ ಗಡಿ ಭದ್ರತಾ ಪಡೆಯ ಯೋಧರು ವಿಫಲಗೊಳಿಸಿದ್ದಾರೆ.
ಮಂಗಳವಾರ ರಾತ್ರಿ 1 ಗಂಟೆ ಸುಮಾರಿಗೆ ಪಾಕಿಸ್ತಾನದ ಕಡೆಯಿಂದ ಭಾರತದ ಕಡೆ ಬರುತ್ತಿರುವ ಡ್ರೋನ್ ಶಬ್ದ ಕೇಳಿ ಬಿಎಸ್ಎಫ್ ಸಿಬ್ಬಂದಿ ಡ್ರೋನ್ ಗೆ ಗುಂಡುಹಾರಿಸಿದ್ದಾರೆ. ಆ ಬಳಿಕ ಡ್ರೋನ್ ಪಾಕಿಸ್ತಾನದ ಕಡೆಗೆ ಹಾರುತ್ತದೆ. ನಂತರ ಶೋಧ ಕಾರ್ಯಾ ಪ್ರಾರಂಭಿಸಿದ ಬಿಎಸ್ಎಫ್ ಯೋಧರು ಎರಡು ಸ್ಥಳದಲ್ಲಿ ಸ್ಫೋಟಕಗಳು ಹಾಗೂ ಪಿಸ್ತೂಲನ್ನು ಪತ್ತೆ ಮಾಡಿದ್ದಾರೆ. ಡ್ರೋನ್ ನಿಂದಲೇ ಸ್ಫೋಟಕಗಳಿರುವ ಪ್ಯಾಕೆಟ್ ಗಳನ್ನು ಎಸೆದಿರುವ ಶಂಕೆ ಇದೆ. ಈ ಪ್ಯಾಕೆಟ್ ಗಡಿಯಿಂದ 2.7 ಕೀ.ಮಿ ದೂರದಲ್ಲಿ ದೊರೆತಿರುವುದಾಗಿ ಹಿರಿಯ ಅಧಿಕಾರಿ ತಿಳಿಸಿದ್ದಾರೆ.