ನವದೆಹಲಿ: ಹಿಜಾಬ್ ಧರಿಸುವ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವುದು ಮೂಲಭೂತ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಟ್ವೀಟ್ ಮಾಡಿದ್ದಾರೆ.
ಶಿಕ್ಷಣ ಪಡೆಯುವ ಮೂಲಭೂತ ಹಕ್ಕನ್ನು ಕಿತ್ತುಕೊಳ್ಳುವುದು ಮತ್ತು ಹಿಜಾಬ್ ಧರಿಸದಂತೆ ಒತ್ತಡ ಹೇರುವುದು ದಬ್ಬಾಳಿಕೆಯ ಪ್ರತಿರೂಪವಾಗಿದೆ. ಭಾರತದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ ಮೂಲಕ ಮುಸಲ್ಮಾನರನ್ನು ಪ್ರತ್ಯೇಕಗೊಳಿಸುವಂತೆ ಮಾಡಲಾಗುತ್ತಿದ್ದು, ಇದು ವ್ಯವಸ್ಥಿತ ಸಂಚಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ಸಚಿವ ಹೇಳಿದ್ದಾರೆ.