Sunday, June 8, 2025

ಐಪಿಎಲ್2022: ಅಂತಿಮವಾಗಿ ತನ್ನ ಹೆಸರು ಪ್ರಕಟಿಸಿದ ಅಹಮದಾಬಾದ್ ತಂಡ

ಮುಂಬೈ: ಅಹಮದಾಬಾದ್ ಮೂಲದ ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಅಂತಿಮವಾಗಿ ತನ್ನ ಹೆಸರನ್ನು ‘ಗುಜರಾತ್ ಟೈಟಾನ್ಸ್’ ಎಂದು ಪ್ರಕಟಿಸಿದೆ. ಈ ತಂಡವನ್ನು ನಾಯಕನಾಗಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ.

2022 ನೇ ಸೀಸನ್ ಲೀಗ್ ಪ್ರವೇಶಿಸುವ ಎರಡು ಹೊಸ ತಂಡಗಳಲ್ಲಿ ಗುಜರಾತ್ ಟೈಟಾನ್ಸ್ ಕೂಡ ಒಂದು. ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡುತ್ತಿದ್ದ ಹಾರ್ದಿಕ್ ಪಾಂಡ್ಯ ಅವರು ‘ಗುಜರಾತ್ ಟೈಟಾನ್ಸ್’ ನ ನಾಯಕರಾಗಿದ್ದಾರೆ. ಇವರಿಗೆ 15 ಕೋಟಿ ಬೆಲೆ ನಿಗದಿಪಡಿಸಲಾಗಿದೆ. ಈ ತಂಡದಲ್ಲಿ ಅಫ್ಘಾನಿಸ್ಥಾನದ ಸ್ಟಾರ್ ಲೆಗ್ ಸ್ಪಿನ್ನರ್ ರಶೀದ್ ಖಾನ್, ಬ್ಯಾಟರ್ ಶುಭಮನ್ ಗಿಲ್ ಮತ್ತಿತರು ತಂಡದ ಪರ ಆಡಲಿದ್ದಾರೆ.

2020 ನೇ ಸೀಸನ್ ಲೀಗ್ ಪ್ರವೇಶಿಸುವ ಎರಡು ಹೊಸ ತಂಡಗಳಲ್ಲಿ ‘ಗುಜರಾತ್ ಟೈಟಾನ್ಸ್’ ತಂಡ ಹಾಗೂ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೂಡ ಒಂದು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles